

ಬೆಳಗಾವಿ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾ ವೀಕ್ಷಕರಾದ ಜಿ.ಎಸ್.ಪಾಂಡಾ ದಾಸ್ ಅವರ ಸಮ್ಮುಖದಲ್ಲಿ ಶನಿವಾರ ನಾಪತ್ರಗಳ ಪರಿಶೀಲನೆ ಜರುಗಿತು.
ಕ್ರಮಬದ್ಧ ನಾಮಪತ್ರಗಳ ವಿವರ ಇಂತಿದೆ: ಭಾರತೀಯ ಜನತಾ ಪಾರ್ಟಿಯಿಂದ ಅಣ್ಣಸಾಹೇಬ.ಎಸ್.ಜೊಲ್ಲೆ, ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ, ಸರ್ವ ಜನತಾ ಪಾರ್ಟಿ ಪಕ್ಷದಿಂದ ಅಪ್ಪಾಸಾಹೇಬ ಕುರಣೆ, ಕರ್ನಾಟಕ ರಾಷ್ಟ್ರಸಮಿತಿ ಪಕ್ಷದಿಂದ ಕುಮಾರ ಡೊಂಗರೆ, ಬಹುಜನ ಭಾರತ ಪಾರ್ಟಿಯಿಂದ ಪವನಕುಮಾರ ಬಾಬುರಾವ ಮಾಳಗೆ, ಭಾರತೀಯ ಜವಾನ ಕಿಸಾನ ಪಾರ್ಟಿಯಿಂದ ಸತ್ಯಪ್ಪ ದಶರಥ ಕಾಳೇಲಿ, ಪಕ್ಷೇತರ ಅಭ್ಯರ್ಥಿಗಳಾದ ಕಾಡಯ್ಯ ಶಂಕರಯ್ಯ ಹಿರೇಮಠ, ಕಾಶಿನಾಥ ಕುರಣಿ, ಗಜಾನನ ಪೂಜಾರಿ, ಜಿತೇಂದ್ರ ಸುಭಾಷ ನೇರ್ಲೆ, ಭೀಮಸೇನ ಸನದಿ, ಮಗದುಮ ಇಸ್ಮಾಯಿಲ್ ಮಗದುಮ, ಮಹೇಶ ಅಶೋಕ, ಮೋಹನ ಮೊಟನ್ನವರ, ಯಾಸೀನ ಸಿರಾಜುದ್ಧಿನ ಪಟಕಿ, ರಾಜು ವಿಜಯ ಸೊಲ್ಲಾಪುರೆ, ವಿಲಾಸ ಮಣ್ಣೂರ, ಶಂಭು ಕಲ್ಲೋಳಿಕರ, ಶ್ರೀಣಿಕ ಅಣ್ಣಾಸಾಹೇಬ ಜಂಗಟೆ, ಸಮ್ಮೇದ ಸರದಾರ ವರ್ಧಮಾನೆ ಅವರುಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ, ಸಹಾಯಕ ಚುನಾವಣಾಧಿಕಾರಿ ಬಸವರಾಜ ಅಡವಿಮಠ ಹಾಗೂ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಉಪಸ್ಥಿತರಿದ್ದರು.
ಏಪ್ರೀಲ 22 ರಂದು ಮಧ್ಯಾಹ್ನ 3 ಗಂಟೆಯ ವರೆಗೆ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದ್ದು, ಮೇ 7 ರಂದು ಮತದಾನ ನಡೆಯಲಿದೆ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ತಿಳಿಸಿದ್ದಾರೆ.