ಚಿಕ್ಕಯ್ಯ, ದೊಡ್ಡಯ್ಯ ಉತ್ಸವ 13ರಿಂದ

9 vikram 6
Published on

ಧಾರವಾಡ: ನಗರದ ಚಿಕ್ಕಯ್ಯ, ದೊಡ್ಡಯ್ಯ ಉತ್ಸವ ಸಮಿತಿ ವತಿಯಿಂದ ಇಲ್ಲಿನ ಮಾಳಮಡ್ಡಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಆ. 13, 14ರಂದು ಚಿಕ್ಕಯ್ಯ, ದೊಡ್ಡಯ್ಯ ಉತ್ಸವ ಏರ್ಪಡಿಸಲಾಗಿದೆ.
ಆ. 13ರಂದು ಚಿಕ್ಕಯ್ಯ ಉತ್ಸವ ನಡೆಯಲಿದ್ದು, ಅಂದು ಮಧ್ಯಾಹ್ನ 1 ಗಂಟೆಗೆ ಶ್ರೀ ಮಾಲತೇಶ ದೇವರಿಗೆ ಲಘು ರುದ್ರಾಭಿಷೇಕ, ಅಲಂಕಾರ ಹಾಗೂ ಭಂಡಾರ ಅರ್ಚನೆ, ಸಂಜೆ 6 ಗಂಟೆಗೆ ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ನಡೆಯಲಿದೆ. ಆ. 14ರಂದು ದೊಡ್ಡಯ್ಯ ಉತ್ಸವ ನಿಮಿತ್ತ ಬೆಳಗ್ಗೆ 8.30ಕ್ಕೆ ಮಲ್ಹಾರಿ ಹೋಮ, ಲಘು ರುದ್ರಾಭಿಷೇಕ, ಶ್ರೀ ಮಾಲ್ಹಸಾಂಬಾ ದೇವಿಗೆ ಕುಂಕುಮಾರ್ಚನೆ ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಡಾ. ವಿಶ್ವನಾಥಶಾಸ್ತ್ರಿ ಹಂಪಿಹೊಳಿ ಉಪನ್ಯಾಸ ನೀಡುವರು. ಅತಿಥಿಯಾಗಿ ವಿದ್ವತ್ ವಿಭೂಷಣ ಶ್ರೀ ಮಧುಸೂಧನ ಶಾಸ್ತ್ರಿಗಳು ಹಂಪಿಹೊಳಿ ಆಗಮಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ನಡೆಯಲಿದೆ ಎಂದು ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net