ಚಿಕ್ಕಟ್ಟಿ ಶಾಲೆಯಲ್ಲಿ ಕೈಬರಹ ಸುಧಾರಣೆ ತರಬೇತಿ ಮುಕ್ತಾಯ

Published on

ವಿಜಯವಾಣಿ ಸುದ್ದಿಜಾಲ ಗದಗ
ಪರಿಶುದ್ಧ ಹಾಗೂ ಸುಂದರ ಬರಹವು ವ್ಯಕ್ತಿಯ ವ್ಯಕ್ತಿತ್ವವನ್ನು ಅಭಿವ್ಯಕ್ತಗೊಳಿಸುತ್ತದೆ. ವಿದ್ಯಾಥಿರ್ ವಿದ್ಯಾಥಿರ್ನಿಯರು ಪ್ರಾಥಮಿಕ ಮಾಧ್ಯಮಿಕ ಹಂತದಲ್ಲೇ ಕೈಬರಹಗಳನ್ನು ಸುಧಾರಿಸಿಕೊಳ್ಳಬೇಕು ಎಂದು ಬನಶ್ರೀ ಇನ್ಸ್​ಟಿಟ್ಯೂಟ್​ ಪ್ರಾಚಾರ್ಯ ಎ್​. ಎಸ್​. ಪಾಟೀಲ ಹೇಳಿದರು.
ಚಿಕ್ಕಟ್ಟಿ ಶಿಣ ಸಮೂಹ ಸಂಸ್ಥೆಯಲ್ಲಿ ಬುಧವಾರ ಶಾಲೆಯ ವಿದ್ಯಾಥಿರ್ ವಿದ್ಯಾಥಿರ್ನಿಯರಿಗೆ ಏರ್ಪಡಿಸಿದ್ದ 4 ದಿನಗಳ ಕೈಬರಹ ಸುಧಾರಣೆ ತರಬೇತಿಯ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿ, ಮಕ್ಕಳ ಮನಸ್ಸು ಅತ್ಯಂತ ಸೂಕ್ಷ$್ಮ ಆಗಿರುತ್ತದೆ. ಶಿಕರು ಮಕ್ಕಳ ಮನಸ್ಥಿತಿಯನ್ನು ಅರಿತು ಬೋಧನೆ ಮಾಡಿದರೆ ಮಕ್ಕಳು ಬೇಗನೆ ಕಲಿಕೆಯುತ್ತಾರೆ ಮತ್ತು ಆಕಷಿರ್ತರಾಗಿ ಕಲಿಕೆಯ ಮೆಟ್ಟಿಲುಗಳನ್ನು ಏರುತ್ತಾರೆ ಎಂದರು.
ತರಬೇತಿ ಪಡೆದ ಮಕ್ಕಳಲ್ಲಿ ಬಹಳಷ್ಟು ತೀಕ್ಷ$್ಣ ಮತ್ತು ಚುರುಕಾದ ಕಲಿಕಾ ಸಾಮರ್ಥ್ಯ ಇರುವುದರ ಪರಿಣಾಮವಾಗಿ ಮಕ್ಕಳು ನಾಲ್ಕೇ ದಿನಗಳಲ್ಲಿ ಕೈಬರಹದಲ್ಲಿ ಸಾಕಷ್ಟು ಗುಣಾತ್ಮಕ ಬದಲಾವಣೆ ತೋರಿಸಿದ್ದಾರೆ ಎಂದು ಪಾಟೀಲ ಹೇಳಿದರು.
ಅಧ್ಯತೆ ವಹಿಸಿ ಮಾತನಾಡಿದ ಚಿಕ್ಕಟ್ಟಿ ಶಿಣ ಸಮೂಹ ಸಂಸ್ಥೆಯ ಸಂಸ್ಥಾಪಕ ಎಸ್​. ವೈ. ಚಿಕ್ಕಟ್ಟಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಂಸ್ಥೆ ಅವಶ್ಯಕ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಮಾಲಿಕೆಯಲ್ಲಿ ಕೈಬರಹ ಸುಧಾರಣೆ ತರಬೇತಿಗೆ ಉತ್ತಮ ಪ್ರತಿಕ್ರಿಯೆ ತೊರೆತಿದೆ. ನಾಲ್ಕೇ ದಿನಗಳಲ್ಲಿ ಮಕ್ಕಳು ಬರಹ ಶೈಲಿಯಲ್ಲಿ ಸಾಕಷ್ಟು ಗುಣಾತ್ಮಕತೆಯನ್ನು ಪಡೆದಿದ್ದಾರೆ ಎಂದರು.
ಕಲಾವತಿ ಕೆಂಚರಾಹುತ್​, ಶೋಭಾ ಸ್ಥಾವರಮಠ, ಲೀಲಾ ಪಾಟೀಲ, ರಿಯಾನ್​ ಮುಲ್ಲಾ, ವೆಂಕಟೇಶ ರಾವ್​, ಶಾಲೆಯ ಶಿಕ, ಶಿಕಿಯರು, ವಿದ್ಯಾಥಿರ್ಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net