

ಅಥಣಿ: ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ ಗುರುತಿಸಿ ಬೆಂಗಳೂರಿನ ್ಯಾಬ್ ಇಂಡಿಯಾ ಸಂಸ್ಥೆ ಗುರುವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೋಷಿಯಲ್ ಅಚ್ಯುಮೆಂಟ್ ಅವಾರ್ಡ್-2024 ಪ್ರಶಸ್ತಿ ನೀಡಿ ಗೌರವಿಸಿದೆ.
ಜತೆಗೆ ಕ್ಯಾಮ್ಸ್ ಕರ್ನಾಟಕ ಸಹಯೋಗದಲ್ಲಿ ಶಿಕ್ಷಕರಿಗಾಗಿ ಜರುಗಿದ ಟೀಚರ್ಸ್ ಬ್ರೇನಿಕ್ ಬ್ಯಾಟಲ್ ಪರೀಕ್ಷೆಯಲ್ಲಿ ಆಯ್ಕೆಯಾದ ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ ವಿಷಯ ಶಿಕ್ಷಕರಾದ ಚಂದ್ರಶೇಖರ ಮೊಗೇರ ಅವರಿಗೆ ಬೆಸ್ಟ್ ಟೀಚರ್ ಅವಾರ್ಡ್-2024 ನೀಡಿದೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ, ಮಾಜಿ ಸಭಾಪತಿ, ವಿಪ ಸದಸ್ಯರಾದ ಕೆ.ಎಸ್.ಪುಟ್ಟಣ್ಣ, ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್.ಕಿರಣಕುಮಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತ ತ್ರಿಲೋಕಚಂದ್ರ, ಚಂಡಿಗಡ ವಿಶ್ವವಿದ್ಯಾಲಯದ ಉಪಕುಲಪತಿ ಆರ್.ಎಸ್.ಭಾವಾ, ್ಯಾಭ್ಯಾ ಇಂಡಿಯಾ ಅಧ್ಯಕ್ಷ ಜಗಜೀತ ಸಿಂಗ, ಕ್ಯಾಮ್ಸ್‌ದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ ಇತರರಿದ್ದರು.