ಸೇನಾನಿಗಳ ಕಾರ್ಯ ಶ್ಲಾಘನೀಯ

DHP 31-1
Published on

ದೇವರಹಿಪ್ಪರಗಿ: ಕರೊನಾ ಸೇನಾನಿಗಳಾದ ಆಶಾ, ಅಂಗನವಾಡಿ, ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯತತ್ಪರತೆಯನ್ನು ಕೇವಲ ಮಾತುಗಳಿಂದ ಅಳೆಯಲಾಗದು. ಅವರ ಸೇವೆ ಅವಿಸ್ಮರಣೀಯ ಎಂದು ಬಿಜೆಪಿ ಧುರೀಣ ಶಂಕರಗೌಡ ಕೋಟಿಖಾನಿ ಹೇಳಿದರು.
ತಾಲೂಕಿನ ಚಿಕ್ಕರೂಗಿ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಶನಿವಾರ ನಡೆದ ಆಶಾ, ಅಂಗನವಾಡಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರೊನಾ ವಿರುದ್ಧದ ಹೋರಾಟದಲ್ಲಿ ಜೀವ ಪಣಕ್ಕಿಟ್ಟು ಜಾಗೃತಿ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ಸೇನಾನಿಗಳ ಸೇವೆಗೆ ನಾವೆಲ್ಲ ತಲೆಬಾಗಲೇಬೇಕು ಎಂದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಮೇಶ ಮಸಬಿನಾಳ ಮಾತನಾಡಿದರು.
ಶಾಸಕರ ಸಹೋದರರಾದ ಸಾಹೇಬಗೌಡ ಪಾಟೀಲ, ಸುರೇಶಗೌಡ ಪಾಟೀಲ ಸೇನಾನಿಗಳಾದ ಆಶಾ, ಅಂಗನವಾಡಿ, ಆರೋಗ್ಯ ಇಲಾಖೆ ಸಿಬ್ಬಂದಿಗೆ ದಿನಸಿ ಕಿಟ್ ವಿತರಿಸುವ ಜತೆಗೆ ಊಟ ಬಡಿಸಿದರು.

ಗುತ್ತಿಗೆದಾರ ಸುರೇಶಗೌಡ ಬಿರಾದಾರ, ವಿಶ್ವನಾಥ ಚಂಡಕಿ, ಜವಾಹರ್ ದೇಶಪಾಂಡೆ, ಶೇಖಪ್ಪ ಗಣಜಲಿ, ಶರಣು ದೇಗಿನಾಳ, ಭೀಮರಾಯಗೌಡ ಬಿರಾದಾರ, ಶರಣಪ್ಪ ಕುಂಬಾರ, ನಿಂಗಣ್ಣ ಕಣ್ಣಿ, ಕಂದಾಯ ನಿರೀಕ್ಷಕ ಆನಂದ ಪಮ್ಮಾರ, ಪಿಡಿಒ ಶಿವಾನಂದ ಮೂಲಿಮನಿ, ಮಲ್ಲು ಮಸಳಿ, ರಮೇಶ ದೇಶಪಾಂಡೆ, ಬಸವರಾಜ ಇಮ್ಮನ, ಸಿದ್ದಾರ್ಥ ಮುಳಸಾವಳಗಿ, ಬಸವರಾಜ ಕುಂಬಾರ, ಸುಭಾಷ ದೇಶಪಾಂಡೆ, ಶಾಂತಪ್ಪ ಭಂಡಾರಿ, ಕಲ್ಯಾಣಿ ನಾಟೀಕಾರ, ಶಿವಾನಂದ ಬಿರಾದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net