ಚಿಕ್ಕಮ್ಯಾಗೇರಿಯನ್ನು ಕಂದಾಯ ಹೋಬಳಿ ಕೇಂದ್ರವಾಗಿ ಮಾಡಲು ಚಿಕ್ಕಮ್ಯಾಗೇರಿ ಗ್ರಾಮಸ್ಥರ ಒತ್ತಾಯ

271221 Chikkamyageri Villagers Appeal
ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿಯನ್ನು ಕಂದಾಯ ಹೋಬಳಿ ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಿ ತಹಸೀಲ್ದಾರ್ ಶ್ರೀಶೈಲ ತಳವಾರ್‌ಗೆ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಸೋಮವಾರ ಮನವಿ ಸಲ್ಲಿಸಿದರು.
Published on

ಯಲಬುರ್ಗಾ: ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮವನ್ನು ಕಂದಾಯ ಹೋಬಳಿ ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಿ ತಹಸೀಲ್ದಾರ್ ಶ್ರೀಶೈಲ ತಳವಾರ್‌ಗೆ ಗ್ರಾಪಂ ಸದಸ್ಯರು ಹಾಗೂ ಸ್ಥಳೀಯರು ಸೋಮವಾರ ಮನವಿ ಸಲ್ಲಿಸಿದರು.

ಚಿಕ್ಕಮ್ಯಾಗೇರಿ ಜಿಪಂ, ತಾಪಂ ಕ್ಷೇತ್ರ ಹೊಂದಿದೆ. ಪಿಯು ಕಾಲೇಜು, ಮುರಾರ್ಜಿ ದೇಸಾಯಿ ವಸತಿ ಶಾಲೆ ಇದ್ದು, ಗ್ರಾಮವು ಹೋಬಳಿ ಕೇಂದ್ರವಾಗುವ ಎಲ್ಲ ಅರ್ಹತೆ ಹೊಂದಿದೆ. ಹಲವು ವರ್ಷಗಳಿಂದ ಮಂಗಳೂರು ಹೋಬಳಿ ವ್ಯಾಪ್ತಿಗೊಳಪಟ್ಟಿದ್ದ ಚಿಕ್ಕಮ್ಯಾಗೇರಿ ಗ್ರಾಮವನ್ನು ತಾಲೂಕು ವಿಭಜನೆ ಬಳಿಕ ತಾತ್ಕಾಲಿಕವಾಗಿ ಯಲಬುರ್ಗಾ ಹೋಬಳಿ ಕೇಂದ್ರದಲ್ಲಿ ಮುಂದುವರಿಸಲಾಗಿದೆ.

ಯಲಬುರ್ಗಾ ಹೋಬಳಿಯಲ್ಲಿ ಹೆಚ್ಚಿನ ಗ್ರಾಮಗಳಿದ್ದು ಆಡಳಿತಾತ್ಮಕ ದೃಷ್ಟಿಯಿಂದ ಇನ್ನೊಂದು ಕಂದಾಯ ಹೋಬಳಿ ಕೇಂದ್ರ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಚಿಕ್ಕಮ್ಯಾಗೇರಿಯನ್ನು ಕಂದಾಯ ಹೋಬಳಿ ಕೇಂದ್ರವಾಗಿ ಮಾಡುವುದರಿಂದ ಸುತ್ತಲಿನ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಹೀಗಾಗಿ ಜಿಲ್ಲಾಧಿಕಾರಿಗೆ ಶಿಫಾರಸು ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಚಿಕ್ಕಮ್ಯಾಗೇರಿಗೆ ಹೋಬಳಿ ಕೇಂದ್ರ ನೀಡದೆ, ಹೊಸದಾಗಿ ರಚನೆಗೊಂಡ ಬೇವೂರು ಹೋಬಳಿ ಕೇಂದ್ರಕ್ಕೆ ನಮ್ಮ ಗ್ರಾಮವನ್ನು ಸೇರಿಸಬಾರದು. ಒಂದು ವೇಳೆ ಸೇರಿಸಿದರೆ ಚಿಕ್ಕಮ್ಯಾಗೇರಿಯ ಬೇವೂರು-ಯಲಬುರ್ಗಾ ಮುಖ್ಯರಸ್ತೆ ಸಂಚಾರ ತಡೆದು ಹೋರಾಡುತ್ತೇವೆ. ಮುಂಬರುವ ತಾಪಂ, ಜಿಪಂ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net