ಸಾಧಕರಿಗೆ ಪ್ರೋತ್ಸಾಹ ನೀಡಿ Jwalamalini JC,

N.R. Pura: Adarsha B. Gowda, President of the Jwalamalini JCI organization, stated that honoring those who perform their professional duties with integrity serves to encourage their future achievements.
ಎನ್.ಆರ್.ಪುರ ತಾಲೂಕು ಚಿಟ್ಟಿಕೊಡಿಗೆಯ ಬೌದ್ಧಿಕ ವಿಕಲಚೇತನ ಹೆಣ್ಣುಮಕ್ಕಳ ಆಶ್ರಯ ಕೇಂದ್ರದಲ್ಲಿ ನಾಲ್ಕು ದಾದಿಯರನ್ನು  ಗೌರವಿಸಲಾಯಿತು. ರಜಿತ್ ವಗಡೆ, ವಿನಯ, ಪ್ರಥಮ್, ಶ್ರೀಹರಿ, ಪ್ರೀತಂ, ಸುಹಾಸ್, ನವೀನ್, ಮನು ಇದ್ದರು.
ಎನ್.ಆರ್.ಪುರ ತಾಲೂಕು ಚಿಟ್ಟಿಕೊಡಿಗೆಯ ಬೌದ್ಧಿಕ ವಿಕಲಚೇತನ ಹೆಣ್ಣುಮಕ್ಕಳ ಆಶ್ರಯ ಕೇಂದ್ರದಲ್ಲಿ ನಾಲ್ಕು ದಾದಿಯರನ್ನು ಗೌರವಿಸಲಾಯಿತು. ರಜಿತ್ ವಗಡೆ, ವಿನಯ, ಪ್ರಥಮ್, ಶ್ರೀಹರಿ, ಪ್ರೀತಂ, ಸುಹಾಸ್, ನವೀನ್, ಮನು ಇದ್ದರು.
Published on: 

ಎನ್.ಆರ್.ಪುರ: ವೃತ್ತಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವವರನ್ನು ಗೌರವಿಸುವುದರಿಂದ ಅವರ ಮುಂದಿನ ಸಾಧನೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ ಬಿ. ಗೌಡ ಹೇಳಿದರು.

ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಚಿಟ್ಟಿಕೊಡಿಗೆಯ ಬೌದ್ಧಿಕ ವಿಕಲಚೇತನ ಹೆಣ್ಣು ಮಕ್ಕಳ ಆಶ್ರಯ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಹಾಗೂ ಆಶ್ರಯ ಕೇಂದ್ರದ ನಾಲ್ಕು ದಾದಿಯರಿಗೆ ‘ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ಸ್’ ಕಾರ್ಯಕ್ರಮದಡಿ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿಟ್ಟಿಕೊಡಿಗೆ ಬೌದ್ಧಿಕ ವಿಕಲಚೇತನ ಹೆಣ್ಣು ಮಕ್ಕಳ ಆಶ್ರಯ ಕೇಂದ್ರದಲ್ಲಿ 31 ಹೆಣ್ಣು ಮಕ್ಕಳಿದ್ದಾರೆ. ಅವರನ್ನು ಇಲ್ಲಿನ ದಾದಿಯರು ತಮ್ಮ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಅವರ ಪ್ರಾಮಾಣಿಕ ಸೇವೆ ಗುರುತಿಸಿ ಜೇಸಿ ಸಂಸ್ಥೆಯಿಂದ ಸನ್ಮಾನ ಮಾಡುತ್ತಿದ್ದೇವೆ ಎಂದರು. ಮಕ್ಕಳಿಂದಲೇ ಕೇಕ್ ಕತ್ತರಿಸಲಾಯಿತು. ನಂತರ ಎಲ್ಲ ಮಕ್ಕಳಿಗೂ ಊಟ ನೀಡಲಾಯಿತು. ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಕಾರ್ಯದರ್ಶಿ ರಜಿತ್ ವಗಡೆ, ಪದಾಧಿಕಾರಿಗಳಾದ ವಿನಯ, ಪ್ರಥಮ್, ಶ್ರೀಹರಿ, ಪ್ರೀತಂ, ಸುಹಾಸ್, ನವೀನ್, ಮನು ಇದ್ದರು.