ವೃಷಭಾರೂಢಾ ತ್ರಿಮೂರ್ತಿ ಅಲಂಕಾರ Horanadu Annapurneshwari

Horanadu Annapurneshwari
ಹೊರನಾಡು ಅನ್ನಪೂರ್ಣೇಶ್ವರಿ ದೇವಿಗೆ ವೃಷಭಾರೂಢಾ ತ್ರಿಮೂರ್ತಿ ಅಲಂಕಾರ.
ಹೊರನಾಡು ಅನ್ನಪೂರ್ಣೇಶ್ವರಿ ದೇವಿಗೆ ವೃಷಭಾರೂಢಾ ತ್ರಿಮೂರ್ತಿ ಅಲಂಕಾರ.
Published on: 

ಕಳಸ: ಹೊರನಾಡು ಅನ್ನಪೂರ್ಣೇಶ್ವರಿ ದೇವಿಗೆ ವೃಷಭಾರೂಢಾ ತ್ರಿಮೂರ್ತಿ ಅಲಂಕಾರ ಮಾಡಿ ಪೂಜಿಸಲಾಯಿತು.

ಭಾನುವಾರ ಬೆಳಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಂಡು ಸಪ್ತಶತಿ ಪಾರಾಯಣ, ನಾಲ್ಕು ವೇದಗಳ ಪಾರಾಯಣ, ಸುಂದರಕಾಂಡ ಪಾರಾಯಣ, ಶ್ರೀದೇವಿ ಭಾಗವತ ಪಾರಾಯಣ, ಕುಂಕುಮಾರ್ಚನೆ ಮತ್ತು ಶ್ರೀ ದುರ್ಗಾ ಮೂಲಮಂತ್ರ ಹೋಮ ನಡೆಯಿತು. ಹೋಮದ ಪೂರ್ಣಾಹುತಿಯನ್ನು ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ದಂಪತಿ ನೆರವೇರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ವಿದುಷಿ ಅನುರಾಧಾ ಮಯ್ಯ ಶ್ರೀ ಸುಮೇಧಾ ಕಲಾ ಪ್ರತಿಷ್ಠಾನದ ಹಿಲಿಯಾಣ ಅವರಿಂದ ಭಕ್ತಿ ಸಂಗೀತ, ರಾತ್ರಿ ವಿದುಷಿ ಬಿ.ಎ.ಸಂಧ್ಯಾ ರಾಮನ್ ಮತ್ತು ಮಕ್ಕಳು ಶಿವಮೊಗ್ಗ ಅವರಿಂದ ಮೆಲೋಡಿಕ್ ವೈಭವ್ ಗಿಟಾರ್ ಮತ್ತು ವಯೋಲಿನ್ ವೈವಿಧ್ಯ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net