ವಾಲ್ಮೀಕಿ ಸಂದೇಶ ಸಾರ್ವಕಾಲಿಕ Valmiki Jayanti

ಬಾಳೆಹೊನ್ನೂರಿನ ಎಸ್‌ಜೆಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಕೆ.ಆರ್.ಭೂದೇಶ, ಬಿ.ಎಸ್.ಲತಾ, ನಟರಾಜ್, ಪ್ರಶಾಂತ್ ಇದ್ದರು.
ಬಾಳೆಹೊನ್ನೂರಿನ ಎಸ್‌ಜೆಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಕೆ.ಆರ್.ಭೂದೇಶ, ಬಿ.ಎಸ್.ಲತಾ, ನಟರಾಜ್, ಪ್ರಶಾಂತ್ ಇದ್ದರು.
Published on: 

ಬಾಳೆಹೊನ್ನೂರು: ಮಹರ್ಷಿ ವಾಲ್ಮೀಕಿ ಸಂದೇಶಗಳು ಸಾರ್ವಕಾಲಿಕ. ಪ್ರತಿಯೊಬ್ಬರ ಜೀವನಕ್ಕೂ ಮಾದರಿಯಾಗಿದೆ ಎಂದು ಎಸ್‌ಜೆಆರ್ ಕಾಲೇಜು ಪ್ರಾಚಾರ್ಯ ಕೆ.ಆರ್.ಭೂದೇಶ ಹೇಳಿದರು.

ಪಟ್ಟಣದ ಎಸ್‌ಜೆಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಾಲ್ಮೀಕಿ ತಮ್ಮ ಜೀವನದಲ್ಲಿ ಕಠಿಣ ತಪಸ್ಸು ಮತ್ತು ಸಾಧನೆಯಿಂದ ಮಹಾನ್ ಋಷಿಯಾಗಿ ರೂಪುಗೊಂಡರು. ಯಾರೂ ಹುಟ್ಟಿನಿಂದ ದೊಡ್ಡವರಲ್ಲ, ತಮ್ಮ ಒಳ್ಳೆಯ ಗುಣಗಳಿಂದ ಮತ್ತು ಕರ್ಮದಿಂದ ದೊಡ್ಡವರಾಗಬಹುದು ಎಂಬುದನ್ನು ಅವರ ಜೀವನ ತೋರಿಸಿಕೊಟ್ಟಿದೆ. ಅವರು ಬರೆದ ರಾಮಾಯಣ ಕೇವಲ ಧರ್ಮ ಗ್ರಂಥವಲ್ಲ. ಅದು ಮನುಷ್ಯನಿಗೆ ಧರ್ಮ, ಸತ್ಯ, ನೈತಿಕತೆ ಕಲಿಸುವ ಜೀವಂತ ಪಾಠವಾಗಿದೆ. ರಾಮ, ಸೀತೆ ಹಾಗೂ ಹನುಮಂತನಂತಹ ಆದರ್ಶ ಪಾತ್ರಗಳ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿ ತೋರಿಸಿದ್ದಾರೆ. ಎಲ್ಲರೂ ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಶಿಕ್ಷಕರಾದ ಬಿ.ಎಸ್.ಲತಾ, ನಟರಾಜ್ ನಾಯಕ್, ಪ್ರಶಾಂತ್‌ಕುಮಾರ್, ಸುಜಾತಾ, ಕೆ.ಎಂ.ರಾಕೇಶ್, ಉಮಾಶಂಕರ್, ರಮಾಮಣಿ, ಪ್ರಗತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net