ರೈತರ ಸಾಲ ಮನ್ನಾ ಮಾಡಿ (Farmers)

Taluk Farmers' Society
ಎನ್.ಆರ್.ಪುರ ತಾಲೂಕು ಕೃಷಿಕ ಸಮಾಜದಿಂದ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪಿ.ಕೆ.ಬಸವರಾಜಪ್ಪ, ಬಿ.ಕೆ.ನಾರಾಯಣಸ್ವಾಮಿ, ನವೀನ್, ಡಿ.ಜಿ.ಮಂಜಪ್ಪ, ಚೇತನ್, ರಂಜಿತ್, ನಾಗರಾಜ್, ತೀರ್ಥೇಶ್, ನಾಗೇಶ್ ಇತರರಿದ್ದರು.

Published on: 

ಎನ್.ಆರ್.ಪುರ: ಬರಗಾಲ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು. ಎನ್.ಆರ್.ಪುರ ತಾಲೂಕನ್ನು ಸಂಪೂರ್ಣ ಬರ ತಾಲೂಕು ಎಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ತಾಲೂಕು ಕೃಷಿಕ ಸಮಾಜದಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಸರ್ಕಾರ ಎನ್.ಆರ್.ಪುರ ತಾಲೂಕನ್ನು ಮಧ್ಯಮ ಬರಗಾಲ ಎಂದು ಘೋಷಣೆ ಮಾಡಿದೆ. ಇದನ್ನು ತೆಗೆದು ಸಂಪೂರ್ಣ ಬರಗಾಲ ಎಂದು ಘೋಷಣೆ ಮಾಡಬೇಕು. ಜಾನುವಾರುಗಳಿಗೆ ಅಗತ್ಯ ಮೇವು ಪೂರೈಸಬೇಕು. ತ್ರಿಫೇಸ್ ವಿದ್ಯುತ್ ಅನ್ನು ಕೆಲವು ತಾಸು ಹೆಚ್ಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು. ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ, ತಾಲೂಕು ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಕಾರ್ಯದರ್ಶಿ ನವೀನ್, ಉಪಾಧ್ಯಕ್ಷ ಡಿ.ಜಿ.ಮಂಜಪ್ಪ, ಖಜಾಂಚಿ ಚೇತನ್, ನಿರ್ದೇಶಕರಾದ ರಂಜಿತ್, ನಾಗರಾಜ್, ತೀರ್ಥೇಶ್, ನಾಗೇಶ್, ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net