ಮಾದಕ ವಸ್ತು ಬಳಕೆಯಿಂದ ಕುಟುಂಬ ನಾಶ drugs

janajāgr̥ti samāvēśa
ಮೂಡಿಗೆರೆಯಲ್ಲಿ ಎಸ್‌ಕೆಎಸ್‌ಎಸ್ ಅಂಗ ಸಂಸ್ಥೆ ವಿಖಾಯ ಜಿಲ್ಲಾ ಸಮಿತಿಯಿಂದ ಮಾದಕ ವಸ್ತು ಹಾಗೂ ಡ್ರಗ್ಸ್ ವಿರುದ್ಧ ಜನಜಾಗೃತಿ ರ‌್ಯಾಲಿ ನಡೆಯಿತು. ಅನಿಶ್ ಕೌಸರಿ, ಇಸ್ಮಾಯಿಲ್ ತಂಙಳ್, ಝೈದ್ ಫೈಝಿ, ಸಿನಾನ್ ಫೈಝಿ, ಮುಸ್ತಫಾ ಯಮಾನಿ, ಸ್ವಾದಿಕ್ ಅಝ್ಹರಿ, ಸಲೀಂ ಅರ್ಶದಿ, ಬದ್ರುದ್ದೀನ್ ದಾರಿಮಿ ಇತರರಿದ್ದರು.
ಮೂಡಿಗೆರೆಯಲ್ಲಿ ಎಸ್‌ಕೆಎಸ್‌ಎಸ್ ಅಂಗ ಸಂಸ್ಥೆ ವಿಖಾಯ ಜಿಲ್ಲಾ ಸಮಿತಿಯಿಂದ ಮಾದಕ ವಸ್ತು ಹಾಗೂ ಡ್ರಗ್ಸ್ ವಿರುದ್ಧ ಜನಜಾಗೃತಿ ರ‌್ಯಾಲಿ ನಡೆಯಿತು. ಅನಿಶ್ ಕೌಸರಿ, ಇಸ್ಮಾಯಿಲ್ ತಂಙಳ್, ಝೈದ್ ಫೈಝಿ, ಸಿನಾನ್ ಫೈಝಿ, ಮುಸ್ತಫಾ ಯಮಾನಿ, ಸ್ವಾದಿಕ್ ಅಝ್ಹರಿ, ಸಲೀಂ ಅರ್ಶದಿ, ಬದ್ರುದ್ದೀನ್ ದಾರಿಮಿ ಇತರರಿದ್ದರು.
Published on: 

ಮೂಡಿಗೆರೆ: ಮಾದಕ ವಸ್ತು ಬಳಕೆಯಿಂದ ಆರೋಗ್ಯದ ಜತೆಗೆ ಕುಟುಂಬ ಕೂಡ ಸರ್ವನಾಶದ ಅಂಚಿಗೆ ತಲುಪುತ್ತದೆ. ಇಂಥ ಅನಿಷ್ಟ ಪಿಡುಗನ್ನು ಸಮಾಜದಿಂದ ನಿರ್ಮೂಲನೆಗೊಳಿಸಲು ಯುವಜನರು ಸಂಘಟಿತರಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಹೇಳಿದರು.

ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಅಂಗ ಸಂಸ್ಥೆಯಾದ ವಿಖಾಯ ಜಿಲ್ಲಾ ಸಮಿತಿಯಿಂದ ಬುಧವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಮಾದಕ ವಸ್ತು ಹಾಗೂ ಡ್ರಗ್ಸ್ ವಿರುದ್ಧ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಮಾದಕ ವಸ್ತುಗಳ ಮಾರಾಟಗಾರರು ಮತ್ತು ಅದನ್ನು ಖರೀದಿಸಿ ಬಳಸುವವರನ್ನು ಕಂಡರೆ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾದಕ ವ್ಯಸನಕ್ಕೆ ಬಲಿಯಾಗದಂತೆ ಸಂಘ-ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳು ಜನಜಾಗೃತಿ ಕಾರ್ಯಕ್ರಮವನ್ನು ನಡೆಸಿದರೆ ಇಂಥ ಅನಿಷ್ಟ ಪಿಡುಗನ್ನು ನಿವಾರಿಸಲು ಸಾಧ್ಯ. ಶಿಕ್ಷಣ ಸಂಸ್ಥೆ ಆವರಣ ಮತ್ತು ಜನನಿಬಿಡ ಪ್ರದೇಶದಲ್ಲಿ ಮಾದಕ ವಸ್ತುಗಳ ಮಾರಾಟ ಹೆಚ್ಚಾಗಿ ನಡೆಯುತ್ತದೆ. ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದರು.

ಅನುಮಾನಾಸ್ಪದ ವ್ಯಕ್ತಿಗಳು ಕಾಲೇಜಿನ ಆವರಣದಲ್ಲಿ ಕಂಡುಬಂದರೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ವಿಷಯ ತಿಳಿಸಿ ಅವರನ್ನು ಪೊಲೀಸರಿಗೆ ಒಪ್ಪಿಸಬೇಕು. ಮಾದಕ ವಸ್ತುಗಳನ್ನು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಾರಾಟ ಮಾಡಲು ಅವಕಾಶ ನೀಡಬಾರದು. ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಮಾದಕ ವಸ್ತುಗಳ ವಿರುದ್ಧ ಹೋರಾಟ ನಡೆಸಬೇಕು ಎಂದು ತಿಳಿಸಿದರು.

ಆರಂಭದಲ್ಲಿ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಮಾದಕ ವಸ್ತು ಮತ್ತು ಡ್ರಗ್ಸ್ ವಿರುದ್ಧ ಘೋಷಣೆ ಕೂಗಲಾಯಿತು. ಖಲಂದರಿಯ ಶಿಕ್ಷಣ ಸಂಸ್ಥೆ ಪ್ರಾಚಾರ್ಯ ಸಿನಾನ್ ಫೈಝಿ ಪ್ರತಿಜ್ಞಾವಿಧಿ ಬೋಧಿಸಿದರು.

ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾ ಅಧ್ಯಕ್ಷ ಸ್ವಾಧಿಕ್ ಅಝ್ಹರಿ, ಧರ್ಮಗುರುಗಳಾದ ಸಲೀಂ ಅರ್ಷದಿ, ಝೈದ್ ಫೈಝಿ, ಸೀನಾನ್ ಫೈಝಿ, ಮುಸ್ತಫಾ ಯಮಾನಿ, ಬದ್ರುದ್ದೀನ್ ದಾರಿಮಿ, ರಹೀಂ ಅಝ್ಹರಿ, ಯಾಕೂಬ್ ಫೈಝಿ, ಟಿ.ಸಿ.ಶಶಿಕುಮಾರ್, ಯಾಸೀರ್, ಶರೀಫ್ ಬಿಳಗುಳ, ನಿಯಾಜ್, ಅಜೀಜ್ ಅರಬಿ, ವಾಹಿದ್, ಅಲ್ತಾಫ್ ಬಿಳಗುಳ, ರಿಯಾಜ್ ಅಣಜೂರು, ಫಾರೂಕ್ ಬಣಕಲ್, ಎಂ.ಯು.ಶರೀಫ್, ಪಿ.ಕೆ.ಹಮೀದ್, ಹಬೀಬ್, ಉಸ್ಮಾನ್, ಅಜ್ಗರ್ ಚಕಮಕ್ಕಿ, ಪಿ.ಕೆ.ಹನೀಫ್, ಕರೀಂ ಇತರರಿದ್ದರು.