ಮಾತೃಭಾಷೆ ಸ್ವಾಭಿಮಾನದ ಪ್ರತೀಕ mother tongue self-respect

ಕಡೂರಿನಲ್ಲಿ ವಿಜಯವಾಣಿ ವರದಿಗಾರ ಎಚ್.ಆರ್.ದೇವರಾಜ್ ಸೇರಿದಂತೆ ವಿವಿಧ ಕ್ಷೇತ್ರದ ಎಂಟು ಸಾಧಕರಿಗೆ ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕ ಕೆ.ಎಸ್.ಆನಂದ್, ಸಿ.ಎಸ್.ಪೂರ್ಣಿಮಾ, ಸಿ.ಆರ್.ಪ್ರವೀಣ್, ಕಲ್ಲೇಶ್, ಅಶೋಕ್ ಮತ್ತಿತರರಿದ್ದರು.
ಕಡೂರಿನಲ್ಲಿ ವಿಜಯವಾಣಿ ವರದಿಗಾರ ಎಚ್.ಆರ್.ದೇವರಾಜ್ ಸೇರಿದಂತೆ ವಿವಿಧ ಕ್ಷೇತ್ರದ ಎಂಟು ಸಾಧಕರಿಗೆ ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕ ಕೆ.ಎಸ್.ಆನಂದ್, ಸಿ.ಎಸ್.ಪೂರ್ಣಿಮಾ, ಸಿ.ಆರ್.ಪ್ರವೀಣ್, ಕಲ್ಲೇಶ್, ಅಶೋಕ್ ಮತ್ತಿತರರಿದ್ದರು.
Published on: 

ಕಡೂರು: ದೈನಂದಿನ ಜೀವನದಲ್ಲಿ ಮಾತೃಭಾಷೆಯನ್ನೇ ಬಳಸುವ ಮೂಲಕ ಭಾಷೆ, ಸಂಸ್ಕೃತಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ತಾಲೂಕು ಆಡಳಿತದಿಂದ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿ, ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ, ಅದು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ, ಜೀವನ ಶೈಲಿ ಮತ್ತು ಸ್ವಾಭಿಮಾನದ ಪ್ರತೀಕ. ಯುವ ಪೀಳಿಗೆ ಭಾಷಾಭಿಮಾನ ಬೆಳೆಸಿಕೊಂಡು ಭಾಷೆಯ ಅಸ್ಮಿತೆ ಉಳಿಸಬೇಕು ಎಂದರು.

ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ, ಎರಡು ಸಾವಿರ ವರ್ಷಗಳಿಗೂ ಮೀರಿದ ಸಾಹಿತ್ಯ ಪರಂಪರೆ ಹೊಂದಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಗೌರವವಿದೆ. ಕರ್ನಾಟಕದ ಸಂಗೀತ ಪರಂಪರೆ ಶ್ರೀಮಂತವಾಗಿದೆ. ರಾಜ್ಯೋತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸಬಾರದು. ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಸ್ವಾಭಿಮಾನವನ್ನು ಎತ್ತಿಹಿಡಿಯುವುದೇ ನಿಜವಾದ ರಾಜ್ಯೋತ್ಸವದ ಆಶಯ ಎಂದರು.

ವಿಜಯವಾಣಿ ತಾಲೂಕು ವರದಿಗಾರ ಎಚ್.ಆರ್.ದೇವರಾಜ್ ಸೇರಿದಂತೆ 8 ಸಾಧಕರಿಗೆ ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ ಯಗಟಿ ಸತೀಶ್ ರಚಿಸಿದ ಕೃತಿ ಬಿಡುಗಡೆಗೊಳಿಸಲಾಯಿತು. ಸಾರಿಗೆ ಇಲಾಖೆಯಿಂದ ಬಸ್ಸನ್ನು ವಿಶೇಷವಾಗಿ ಅಲಂಕರಿಸಿ ಮೈದಾನದ ಆವರಣದಲ್ಲಿ ಮೆರವಣಿಗೆ ನಡೆಸಿದ್ದು ಗಮನಸೆಳೆಯಿತು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಆಸಂಧಿ ಕಲ್ಲೇಶ್, ಕೆಡಿಪಿ ಸದಸ್ಯ ಅಶೋಕ್, ತಾಪಂ ಇಒ ಸಿ.ಆರ್.ಪ್ರವೀಣ್, ಬಿಇಒ ತಿಮ್ಮಯ್ಯ, ಸಿಪಿಐ ಟಿ.ಎಸ್.ಮಧುಕುಮಾರ್, ನಟರಾಜ್, ಕಲ್ಲಪ್ಪ, ದೇವರಾಜ್, ಡಾ. ಉಮೇಶ್, ಕೆ.ಪ್ರಕಾಶ್, ಕರವೇ ಸಿದ್ದಪ್ಪ, ಕಂದಾಯ ನಿರೀಕ್ಷಕ ರವಿಕುಮಾರ್ ಇತರರಿದ್ದರು.