

ಎನ್.ಆರ್.ಪುರ: ಪಟ್ಟಣದಲ್ಲಿ ಆರಂಭವಾದ ಮಕ್ಕಳ ಮೇಳವೇ ಕಾಲಕ್ರಮೇಣ ಪ್ರತಿಭಾ ಕಾರಂಜಿಯಾಗಿ ಹೊರ ಹೊಮ್ಮಿತು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಜೆ.ಆಂಟೋನಿ ತಿಳಿಸಿದರು.
ಬಸ್ತಿಮಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. 1990ರ ದಶಕದಲ್ಲಿ ಆಗಿನ ಬಿಇಒ ಆಗಿದ್ದ ರಾಮರಾವ್ ಎಂಬುವರು ಮಕ್ಕಳ ಪ್ರತಿಭೆಗೆ ಅವಕಾಶ ನೀಡಲು ತಾಲೂಕು ಮಟ್ಟದ ಮಕ್ಕಳ ಮೇಳ ರೂಪಿಸಿದರು. ನಂತರ ಮಕ್ಕಳ ಮೇಳವು ಜಿಲ್ಲಾ ಮಟ್ಟಕ್ಕೆ ವಿಸ್ತರಣೆಯಾಯಿತು. 10 ವರ್ಷದ ನಂತರ ಆಗ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಎಚ್.ಜಿ.ಗೋವಿಂದೇಗೌಡರ ಕಾಲದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಪ್ರಾರಂಭವಾಯಿತು. ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಗೆ ಸರ್ಕಾರ ನೀಡುವ ಅನುದಾನ ಕಡಿಮೆ ಇದ್ದು ಪಾಲಕರು, ದಾನಿಗಳ ಸಹಕಾರದಿಂದ ಹಬ್ಬದ ವಾತಾವರಣದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಇಒ ಶಬಾನಾ ಅಂಜುಮ್ ಮಾತನಾಡಿ, ಪ್ರತಿಭಾ ಕಾರಂಜಿ ವಲಯ ಮಟ್ಟದಿಂದ ಪ್ರಾರಂಭವಾಗಿ ರಾಜ್ಯ ಮಟ್ಟದವರೆಗೂ ನಡೆಯುತ್ತದೆ. ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಯಿಂದ ನೀಡುವ ಅನುದಾನ ಕಡಿಮೆ ಇದ್ದರೂ ದಾನಿಗಳ ಸಹಾಯದಿಂದ ಅದ್ದೂರಿಯಾಗಿ ನಡೆಸುತ್ತಾರೆ ಎಂದರು.
ಬಸ್ತಿಮಠ ಎಸ್‌ಡಿಎಂಸಿ ಅಧ್ಯಕ್ಷ ರವಿ, ಶಿಕ್ಷಣ ಸಂಯೋಜಕ ಬಿ.ಕೆ.ರಂಗಪ್ಪ, ಇಸಿಒ ಬಿ.ಕೆ.ರಂಗಪ್ಪ, ಸಿಆರ್‌ಪಿ ಅನಂತಪ್ಪ, ಕೆ.ಎನ್.ಶಿವದಾಸ್, ಅಶೋಕ್, ಬಿ.ನಂಜುಂಡಪ್ಪ, ಡೈಸಿ, ಡಿ.ರಾಮು, ಉದಯಗಿಲ್ಲಿ, ಅಮೀರ್‌ಹಂಝ, ಶಿಲ್ಪಕುಮಾರಿ, ರಾಜೇಶ್ವರಿ, ಸುಭಾಷ್, ಸಿಆರ್‌ಪಿ ಅನಂತಪ್ಪ, ನೇತ್ರಾವತಿ, ಮಂಜುಶ್ರೀ ಇತರರಿದ್ದರು.