ಪೌರಕಾರ್ಮಿಕರಿಗೆ ಆರ್ಥಿಕ ಭದ್ರತೆ ಅಗತ್ಯ ( Civic workers)

Civic workers
ಶೃಂಗೇರಿ ಪಪಂನಲ್ಲಿ ಪೌರಕಾರ್ಮಿಕರನ್ನು ಗೌರವಿಸಲಾಯಿತು. ರಮೇಶ್, ಕುಮಾರ್, ಕೃಷ್ಣ ಇದ್ದರು.
ಶೃಂಗೇರಿ ಪಪಂನಲ್ಲಿ ಪೌರಕಾರ್ಮಿಕರನ್ನು ಗೌರವಿಸಲಾಯಿತು. ರಮೇಶ್, ಕುಮಾರ್, ಕೃಷ್ಣ ಇದ್ದರು.
Published on

ಶೃಂಗೇರಿ: ಸ್ವಚ್ಛತೆ ಹಾಗೂ ಸಮುದಾಯದ ಆರೋಗ್ಯಕ್ಕಾಗಿ ಶ್ರಮಿಸುವ ಪೌರಕಾರ್ಮಿಕರು ಪಟ್ಟಣದ ನಿಜವಾದ ಸ್ವಚ್ಛತಾ ಯೋಧರು ಎಂದು ಪಪಂ ಆಡಳಿತಾಧಿಕಾರಿ ಅನುಪ್ ಸಂಜೋಗ್ ತಿಳಿಸಿದರು.

ಪಪಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕಷ್ಟಪಟ್ಟು ದುಡಿಯುವ ಅವರ ಪರಿಶ್ರಮ ಹಿರಿದು. ಅವರ ಸೇವೆಗೆ ನಾವು ಸದಾ ಕೃತಜ್ಞರಾಗಿರಬೇಕು. ಅವರಿಗೆ ಸರಿಯಾದ ಮೂಲ ಸೌಕರ್ಯಗಳು ಮತ್ತು ಸುರಕ್ಷತಾ ಪರಿಕರಗಳು ಸಿಗುವಂತೆ ಮಾಡಬೇಕಾಗಿರುವುದು ಆದ್ಯ ಕರ್ತವ್ಯ ಎಂದರು.

ಪೌರಕಾರ್ಮಿಕರ ಸಂಘದ ಅಧ್ಯಕ್ಷ ಸುಕೇಶ್ ಮಾತನಾಡಿ, ಪೌರಕಾರ್ಮಿಕರಲ್ಲಿ ಹೆಚ್ಚಿನವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ಕಾಯಂ ಉದ್ಯೋಗದ ಭದ್ರತೆ ಸಿಗುತ್ತಿಲ್ಲ. ಕಷ್ಟದ ಕೆಲಸಕ್ಕೆ ಸೂಕ್ತ ವೇತನದ ಜತೆ ಪ್ರತಿವರ್ಷ ವೈದ್ಯಕೀಯ ತಪಾಸಣೆಯ ಅಗತ್ಯವಿದೆ ಎಂದರು.

ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಪೌರಕಾರ್ಮಿಕರನ್ನು ಗೌರವಿಸಲಾಯಿತು. ಪಪಂ ಸಿಬ್ಬಂದಿ ಪ್ರಸನ್ನ, ಮಂಜುನಾಥ್, ಪೌರಕಾರ್ಮಿಕರಾದ ಸುಜಾತಾ, ಗೋಪಾಲ್, ಲಕ್ಷ್ಮೀ, ಶ್ರೀನಿವಾಸ್, ರಹಮತ್, ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net