

ಬೀರೂರು: ಇಲ್ಲಿನ ಭೋವಿ ಕಾಲನಿಯ ದುರ್ಗಮ್ಮ ದೇವಾಲಯದ ಮುಂಭಾಗದಲ್ಲಿ ಮಂಗಳವಾರ ರಾತ್ರಿ ರಾಕೆಟ್ ಪಟಾಕಿಯೊಂದು ಮನೆಯ ಮೇಲ್ಛಾವಣಿ ಮೇಲೆ ಹಾಸಿದ್ದ ಟಾರ್ಪಲ್‌ನ ಮೇಲೆ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಹಂಚಿನ ಚಾವಣಿ ಸುಟ್ಟು ಹಾನಿಯಾಗಿದೆ. ಪೂಜಾರಿ ಭೋವಿ ಎಂಬುವವರಿಗೆ ಸೇರಿದ ಮನೆಯ ಮೇಲ್ಛಾವಣಿಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಜಾಗರೂಕರಾದ ಸ್ಥಳೀಯರು ಕಡೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಮನೆ ಮುಂಭಾಗದ ಹಂಚಿನ ಛಾವಣಿ, ಬಟ್ಟೆ ಇನ್ನಿತರ ವಸ್ತ್ತುಗಳು ಸುಟ್ಟು ಹಾನಿಯಾಗಿವೆ. ಶೀಘ್ರ ಕಾರ್ಯಾಚರಣೆಯಿಂದ ಯಾವುದೇ ದೊಡ್ಡ ಮಟ್ಟದ ಅನಾಹುತ ಸಂಭವಿಸಿಲ್ಲ.