ಪಂಚ ಗ್ಯಾರಂಟಿ ಜತೆಗೆ ಅಭಿವೃದ್ಧಿಗೂ ಆದ್ಯತೆ

Priority for development
ಮೆಣಸೆ ಗ್ರಾಪಂ ಕಿಕ್ರೆ ಗ್ರಾಮದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಕೊಡ್ತಲ್ ರಮೇಶ್, ನಟರಾಜ್ ಮಾರನಕೊಡಿಗೆ ಅವರನ್ನು ಗ್ರಾಮಸ್ಥರು ಗೌರವಿಸಿದರು. ಮೇಘಳಬೈಲು ಶಿವಶಂಕರ್, ಶ್ರೀನಿವಾಸ್ ಕೆಳಕೂಡಿಗೆ, ಪ್ರಭಾಕರ್ ಪಡುಬೈಲು ಇತರರಿದ್ದರು.
ಮೆಣಸೆ ಗ್ರಾಪಂ ಕಿಕ್ರೆ ಗ್ರಾಮದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಕೊಡ್ತಲ್ ರಮೇಶ್, ನಟರಾಜ್ ಮಾರನಕೊಡಿಗೆ ಅವರನ್ನು ಗ್ರಾಮಸ್ಥರು ಗೌರವಿಸಿದರು. ಮೇಘಳಬೈಲು ಶಿವಶಂಕರ್, ಶ್ರೀನಿವಾಸ್ ಕೆಳಕೂಡಿಗೆ, ಪ್ರಭಾಕರ್ ಪಡುಬೈಲು ಇತರರಿದ್ದರು.
Published on: 

ಶೃಂಗೇರಿ: ಪಂಚ ಗ್ಯಾರಂಟಿ ಯೋಜನೆ ಜತೆಗೆ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಕ್ಕೂ ಹೆಚ್ಚು ಒತ್ತು ನೀಡುತ್ತಿದೆ. ರಸ್ತೆ, ಸೇತುವೆ ಮುಂತಾದ ಮೂಲ ಸೌಕರ್ಯಗಳಿಗೂ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಮೆಣಸೆ ಗ್ರಾಪಂ ಕಿಕ್ರೆ ಹಳ್ಳ ಸೇತುವೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಕಿಕ್ರೆ ಸೇತುವೆ ಮೂರು ದಶಕಗಳ ಹಿಂದೆ ಅಂದಿನ ಮಂಡಲಪ್ರಧಾನ ಮೇಘಳಬೈಲು ಶ್ರೀನಿವಾಸಯ್ಯ ಅವರ ಕಾಲದಲ್ಲಿ ನಿರ್ಮಾಣಗೊಂಡಿತ್ತು. ಮಳೆಗಾಲದಲ್ಲಿ ಸೇತುವೆ ಅಸ್ತಿತ್ವ ಕಳೆದುಕೊಂಡಿತ್ತು. ಗ್ರಾಮೀಣ ಜನರ ಬಹಳ ದಿನಗಳ ಬೇಡಿಕೆ ಪ್ರಸ್ತುತ ಸಾಕಾರಗೊಳ್ಳುತ್ತಿದೆ. 2.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ ಎಂದರು.

ತಾಲೂಕಿನಲ್ಲಿ ಇನ್ನಷ್ಟು ರಸ್ತೆ, ಸೇತುವೆ ನಿರ್ಮಾಣಕ್ಕೆ ಶೀಘ್ರ ಗುದ್ದಲಿಪೂಜೆ ನೆರವೇರಿಸಲಾಗುವುದು. ಅಭಿವೃದ್ಧಿ ಎಂಬುದು ರಾಜ್ಯ ಸರ್ಕಾರದ ಮೂಲಧ್ಯೇಯವಾಗಿದ್ದು, ತಾಲೂಕಿನ ಜನರ ಬೇಡಿಕೆಗಳಿಗೆ ಹೆಚ್ಚು ಆದ್ಯತೆ ನೀಡಿ ಮುಂಬರುವ ದಿನಗಳಲ್ಲಿ ಸ್ಪಂದಿಸಲಾಗುವುದು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್ ಕೊಡ್ತಲ್ ಮಾತನಾಡಿ, ಮೆಣಸೆ ಗ್ರಾಪಂ ವ್ಯಾಪ್ತಿಯ ಮಸಿಗೆ-ಹಾಲಂದೂರು ರಸ್ತೆ, ಕಿಕ್ರೆ ಗ್ರಾಮದ ಕೆಳಕೊಪ್ಪ ರಸ್ತೆ ದುರಸ್ತಿ, ಆಟೋ ಹಾಗೂ ಬಸ್ ನಿಲ್ದಾಣದ ಸಮೀಪ ಸುಲಭ್ ಶೌಚಗೃಹ ಹೀಗೆ 12 ಕಡೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದ್ದು, ಸುಮಾರು ಆರು ಕೋಟಿ ರೂಪಾಯಿಗೂ ಹೆಚ್ಚು ಅನುದಾನವನ್ನು ಕಾಮಗಾರಿಗೆ ಮೀಸಲಿಡಲಾಗಿದೆ. ನುಡಿದಂತೆ ನಡೆಯುವ ಶಾಸಕ ಟಿ.ಡಿ.ರಾಜೇಗೌಡ ಅವರ ಜನಪರ ಕಾಳಜಿ ಸರ್ವರಿಗೂ ಮಾದರಿ ಎಂದರು.

ಮೆಣಸೆ ಗ್ರಾಪಂ ಮಾಜಿ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ಕಾಂಗ್ರೆಸ್ ಮುಖಂಡರಾದ ಸಂತೋಷ್ ಕಾಳ್ಯ, ಅನಿಲ್ ಹೊಸಕೊಪ್ಪ, ನವೀನ್ ಕೆಳಕೊಪ್ಪ, ತಿಮ್ಮಪ್ಪ, ನಟರಾಜ್ ಮಾರನಕೊಡಿಗೆ ಇತರರಿದ್ದರು.