ನಿವೇಶನಕ್ಕಾಗಿ ಗುಡಿಸಲು ನಿರ್ಮಿಸಿ ಪ್ರತಿಭಟನೆ Protest staged by building a hut

ಸತ್ತಿಹಳ್ಳಿ ಗ್ರಾಪಂ ತೋಳೂರು ಗುಡ್ಡದ ಅರಣ್ಯ ಇಲಾಖೆ ಜಾಗದಲ್ಲಿ ಜನರು ಗುಡಿಸಲು ನಿರ್ಮಿಸಿಕೊಂಡು ಪ್ರತಿಭಟನೆ ನಡೆಸಿದರು.
ಸತ್ತಿಹಳ್ಳಿ ಗ್ರಾಪಂ ತೋಳೂರು ಗುಡ್ಡದ ಅರಣ್ಯ ಇಲಾಖೆ ಜಾಗದಲ್ಲಿ ಜನರು ಗುಡಿಸಲು ನಿರ್ಮಿಸಿಕೊಂಡು ಪ್ರತಿಭಟನೆ ನಡೆಸಿದರು.
Published on: 

ಆಲ್ದೂರು: ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ತೋಳೂರುಗುಡ್ಡದ ಅರಣ್ಯ ಇಲಾಖೆ ಜಾಗದಲ್ಲಿ ಸುತ್ತಮುತ್ತಲಿನ ನೂರಾರು ಜನ ಗುಡಿಸಲು ನಿರ್ಮಿಸಿಕೊಂಡು ಪ್ರತಿಭಟನೆ ನಡೆಸಿದರು.

ಸತ್ತಿಹಳ್ಳಿ ಗ್ರಾಮದ ಸರ್ವೇ ನಂ.167ರ ತೋಳೂರು ಗುಡ್ಡದಲ್ಲಿ ಸುತ್ತಮುತ್ತಲಿನ ಭೂತನಕಾಡು, ಸತ್ತಿಹಳ್ಳಿ, ತೋಳೂರುಗುಡ್ಡ, ಹಾಂದಿ ಗ್ರಾಮಸ್ಥರು ಎರಡು ದಿನಗಳಿಂದ ನಿವೇಶನಕ್ಕಾಗಿ ಆಗ್ರಹಿಸಿ ಗುಡಿಸಲು ನಿರ್ಮಿಸಿಕೊಂಡು ಪ್ರತಿಭಟನೆ ನಡೆಸಿದರು.

ತೋಳೂರು ಗುಡ್ಡದ ವಾಸಿ ಪ್ರವೀಣ್ ಮಾತನಾಡಿ, 20 ವರ್ಷಗಳಿಂದ ನಿವೇಶನಕ್ಕಾಗಿ ಸತ್ತಿಹಳ್ಳಿ ಗ್ರಾಪಂಗೆ ಅರ್ಜಿ ಸಲ್ಲಿಸಿ ಬೇಸತ್ತು ಹೋಗಿದ್ದೇವೆ. ನಿವೇಶನಕ್ಕಾಗಿ ಇದೇ ಸರ್ವೇ ನಂಬರ್‌ನಲ್ಲಿ 10 ಎಕರೆ ಜಾಗ ಮೀಸಲಿಡಲಾಗಿದೆ ಎಂದು ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ನಿವೇಶನ ಹಂಚಿಕೆ ಮಾಡಿಲ್ಲ. ಆದಿವಾಸಿಗಳಂತೆ ಬದುಕುತ್ತಿದ್ದೇವೆ. ಒಂದು ಮನೆಯಲ್ಲಿ ಹತ್ತು ಜನ ವಾಸ ಮಾಡುತ್ತಿದ್ದೇವೆ. ಈ ಬಾರಿ ನಿವೇಶನ ನೀಡಲೇಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಆಲ್ದೂರು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಪೂರ್ಣೇಶ್ ಕೆಳಗೂರು ಮಾತನಾಡಿ, 2010ರಲ್ಲಿ ಸರ್ವೇ ನಂ.167ರಲ್ಲಿ ನಿವೇಶನ ಹಂಚಿಕೆ ಮಾಡಲು 10 ಎಕರೆ ಜಾಗ ಮೀಸಲಿಟಿದ್ದಾರೆ. ಆದರೆ 3 ಎಕರೆ ಜಾಗವನ್ನು ಮಾತ್ರ ನಿವೇಶನಕ್ಕೆ ಎಂದು ತೋರಿಸಿದ್ದು, 7 ಎಕರೆ ಜಾಗ ತೋರಿಸಿಲ್ಲ. ಈ ಜಾಗವನ್ನು ಡೀಮ್ಡ್ ಅರಣ್ಯ ಎಂದು ತೋರಿಸಿದ್ದು, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಾಗ ಗುರುತು ಮಾಡಿ ಸರ್ವೇ ಮಾಡಿ ಸತ್ತಿಹಳ್ಳಿ ಗ್ರಾಪಂಗೆ ಹಸ್ತಾಂತರಿಸಿದರೆ ನಿವೇಶನ ಹಂಚಿಕೆ ಮಾಡಲು ಅನುಕೂಲವಾಗುತ್ತದೆ. ಈ ಭಾಗದಲ್ಲಿ ಕಾರ್ಮಿಕ ಕುಟುಂಬಗಳಿದ್ದು, ದಶಕಗಳ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net