ದೇವರ ಆಭರಣ ಹೂತಿಟ್ಟವರ ಬಂಧನ

Arrest of those who buried the deity's ornaments
ಇಸ್ಲಾಂ
ಇಸ್ಲಾಂ
Published on: 

ಮೂಡಿಗೆರೆ: ಮಾಕೋನಹಳ್ಳಿ, ತುದಿಯಾಲ ಗ್ರಾಮಗಳ ನಾಲ್ಕು ದೇವಾಲಯಗಳ ಬಾಗಿಲು ಒಡೆದು ಹುಂಡಿ ಹಣ ಹಾಗೂ ದೇವರ ಮೂರ್ತಿ ಮೇಲಿನ ಆಭರಣ ಕದ್ದು, ಆಭರಣ ಹೂತಿಟ್ಟಿದ್ದ ಅಸ್ಸಾಂ ಮೂಲದ ಇಬ್ಬರು ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.

ಇಸ್ಲಾಂ (24) ಮತ್ತು ಬಾಬರ್ (25) ಬಂಧಿತ ಆರೋಪಿಗಳು. ಮಾಕೋನಹಳ್ಳಿ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನ, ತುದಿಯಾಲ ಗ್ರಾಮದ ಅಮ್ಮನವರ ಗುಡಿ ಸೇರಿದಂತೆ ಗ್ರಾಮದ 4 ದೇವಾಲಯಗಳಲ್ಲಿ 15 ದಿನಗಳಿಂದ ಕಳ್ಳತನ ನಡೆಯುತ್ತಿತ್ತು. ಆದರೆ ಆರೋಪಿಗಳ ಸುಳಿವು ಪತ್ತೆಯಾಗಿರಲಿಲ್ಲ. ಮಾಕೋನಹಳ್ಳಿ ಕೃಷ್ಣೇಗೌಡ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಗಳು ಮಾಕೋನಹಳ್ಳಿ ಎಂ.ಬಿ.ಮಂಜುನಾಥ ಗೌಡ ಎಂಬುವವರ ತೋಟದ ಕೂಲಿಲೈನ್‌ನಲ್ಲಿ ಆರು ತಿಂಗಳಿಂದ ವಾಸವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಆರೋಪಿಗಳು ರಾತ್ರಿ ವೇಳೆ ಗ್ರಾಮದ ದೇವಸ್ಥಾನಗಳ ಬಾಗಿಲು ಒಡೆದು ಬೆಳ್ಳಿಯ ಆಭರಣ ಹಾಗೂ ಹುಂಡಿ ಹಣ ದೋಚಿದ್ದರು. ಬೆಳ್ಳಿಯ ಆಭರಣಗಳನ್ನು ಕಾಫಿ ತೋಟದಲ್ಲಿ ಗುಂಡಿ ತೆಗೆದು ಹೂತಿಟ್ಟಿದ್ದರು ಎಂದು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ.