ದಾರಿಯಲ್ಲಿ ಸಿಕ್ಕ ಹಣ ವಾಪಸ್ ಕೊಟ್ಟ ಆಟೋ ಚಾಲಕ Auto-rickshaw driver returns money

ಕೊಪ್ಪ ಪೊಲೀಸ್ ಠಾಣೆಯಲ್ಲಿ ಕೃಷ್ಣಮೂರ್ತಿಗೆ ವಿಜಯಕುಮಾರ್ ಹಸ್ತಾಂತರಿಸಿದರು. ಎಎಸ್‌ಐ ಮಹೇಶ್, ಗುರುಮೂರ್ತಿ, ರವಿ ಶೆಟ್ಟಿ ಇತರರಿದ್ದರು.
ಕೊಪ್ಪ ಪೊಲೀಸ್ ಠಾಣೆಯಲ್ಲಿ ಕೃಷ್ಣಮೂರ್ತಿಗೆ ವಿಜಯಕುಮಾರ್ ಹಸ್ತಾಂತರಿಸಿದರು. ಎಎಸ್‌ಐ ಮಹೇಶ್, ಗುರುಮೂರ್ತಿ, ರವಿ ಶೆಟ್ಟಿ ಇತರರಿದ್ದರು.
Published on: 

ಕೊಪ್ಪ: ದಾರಿಯಲ್ಲಿ ಸಿಕ್ಕಿದ್ದ ಹಣದ ವಾರಸುದಾರರನ್ನು ಪತ್ತೆಹಚ್ಚಿದ ಆಟೋ ಚಾಲಕ ಪೊಲೀಸರ ಮೂಲಕ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸೆ.27ರಂದು ತಾಲೂಕು ಆಟೋ ಮಾಲಿಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ವಿಜಯಕುಮಾರ್ ಅವರಿಗೆ ದಾರಿಯಲ್ಲಿ ಸಿಕ್ಕಿದ್ದ 9,120 ರೂಪಾಯಿಯನ್ನು ಅದರ ವಾರಸುದಾರ ಕೃಷ್ಣಮೂರ್ತಿ ತಲಮಕ್ಕಿ ಅವರಿಗೆ ಸೋಮವಾರ ಕೊಪ್ಪ ಠಾಣೆ ಎಎಸ್‌ಐ ಮಹೇಶ್ ಹಾಗೂ ಗುರುಮೂರ್ತಿ ಸಮ್ಮುಖದಲ್ಲಿ ಹಸ್ತಾಂತರಿಸಿದರು. ವಿಜಯ್‌ಕುಮಾರ್ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಸಂಘದ ಸದಸ್ಯ ರವಿ ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net