ತಳ ಸಮುದಾಯದ ಜೀವನ ಪರಿವರ್ತನೆಯಾಗಲಿ marginalized be transformed

ರಂಗೇನಹಳ್ಳಿಯಲ್ಲಿ ಆಯೋಜಿಸಿದ್ದ ದೀಪಾವಳಿ ಮಿಲನ್ ಕಾರ್ಯಕ್ರಮವನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಉದ್ಘಾಟಿಸಿದರು. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಡಿ.ಎಸ್.ಸುರೇಶ್, ಜಿ.ವಾದಿರಾಜ್, ಗುರು ಗಣೇಶ್, ಬಿ.ಆರ್.ಲೋಹಿತ್, ಬಿ.ಎಸ್.ಚೈತ್ರಶ್ರೀ ಇತರರಿದ್ದರು.
ರಂಗೇನಹಳ್ಳಿಯಲ್ಲಿ ಆಯೋಜಿಸಿದ್ದ ದೀಪಾವಳಿ ಮಿಲನ್ ಕಾರ್ಯಕ್ರಮವನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಉದ್ಘಾಟಿಸಿದರು. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಡಿ.ಎಸ್.ಸುರೇಶ್, ಜಿ.ವಾದಿರಾಜ್, ಗುರು ಗಣೇಶ್, ಬಿ.ಆರ್.ಲೋಹಿತ್, ಬಿ.ಎಸ್.ಚೈತ್ರಶ್ರೀ ಇತರರಿದ್ದರು.
Published on: 

ತರೀಕೆರೆ: ಪ್ರಸ್ತುತ ಸನ್ನಿವೇಶದಲ್ಲಿ ಬದಲಾವಣೆಯಾಗುತ್ತಿರುವಾಗ ತಳ ಸಮುದಾಯದವರ ಜೀವನ ಪರಿವರ್ತನೆ ಏಕಾಗಬಾರದು ಎಂದು ಚಿತ್ರದುರ್ಗ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಪ್ರಶ್ನಿಸಿದರು.

ರಂಗೇನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅಖಿಲ ಭಾರತ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ದೀಪಾವಳಿ ಮಿಲನ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂದುಳಿದವರು, ಶಿಕ್ಷಣ ವಂಚಿತರು ಮುಂದೆ ಬರಲು ಬಾಬಾ ಸಾಹೇಬ ಅಂಬೇಡ್ಕರ್ ರಚಿಸಿರುವ ಸಂವಿಧಾನ ಅವಕಾಶ ನೀಡಿದ್ದು, ಶೋಷಣೆ ತಪ್ಪಿದಂತಾಗಿದೆ. ತಳ ಸಮುದಾಯ ಅಚಲ ಗುರಿಯೊಂದಿಗೆ ಹೆಜ್ಜೆ ಇಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಮೂಢನಂಬಿಕೆ, ಕಂದಾಚಾರ ಬಿಟ್ಟು ಶಿಕ್ಷಣದ ಜತೆ ಆರ್ಥಿಕ ಪ್ರಗತಿ ಮೂಲಕ ಬದಲಾವಣೆ ಹೊಂದಬೇಕು ಎಂದರು.

ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಮಾರ್ಗದರ್ಶನದ ಕೊರತೆ ಇದ್ದು, ಅಭಿವದ್ಧಿ ವಂಚಿತ ಸಮುದಾಯದ ಗುರುಪೀಠ ಸ್ಥಾಪಿಸಲು ಚಿಂತಿಸಲಾಗುವುದು. ಪ್ರಮುಖರೊಂದಿಗೆ ಸಮಾಲೋಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಅಲೆದಾಟದಿಂದ ಸಮುದಾಯದ ಪರಿಸ್ಥಿತಿ ಬಿಗಡಾಯಿಸಿದೆ. ಹಿಂದುತ್ವ ಭಾರತದ ಅಸ್ಮಿತೆಯಾದರೂ, ಜಾತಿ ಮೇಲೆ ದೇಶ ನಡೆಯುತ್ತಿದೆ. ಜಾತೀಯತೆ ಹೋಗಲಾಡಿಸಲು ಆರ್‌ಎಸ್‌ಎಸ್ ಹುಟ್ಟಿದೆ. ಬರೀ ಬೋಗಿಗಳಾದ ನಮಗೆ ಹಿಂದುತ್ವವೇ ಇಂಜಿನ್ ಆಗಿದೆ. ಅಧಿಕಾರದ ಕೀಲಿಕೈ ಅಭಿವದ್ಧಿಯ ಅಸವಾಗಿದ್ದು, ದಮನಿತರು ಯಾವುದೇ ರಾಜಕೀಯ ಪಕ್ಷದ ಗುಲಾಮರಾಗದೆ ಸಂಘಟಿತರಾಗಿ ಸಂವಿಧಾನಬದ್ಧ ಹಕ್ಕು ಪಡೆದುಕೊಳ್ಳಬೇಕು ಎಂದರು.

ಬಿಜೆಪಿ ಅಲೆಮಾರಿ ಸಮುದಾಯದ ನಿಗಮ ಸ್ಥಾಪನೆ ಮಾಡಿದ್ದರೂ, ಕಾಂಗ್ರೆಸ್‌ನ ತಿರಸ್ಕೃತ ಮನೋಭಾವದಿಂದ ಅದು ಊರ್ಜಿತವಾಗಿಲ್ಲ. ಸಮುದಾಯದ ಮಂದಿ ಪ್ರಜ್ಞಾವಂತರಾಗಿ ಪರಿವರ್ತನೆ ಹೊಂದಬೇಕು. ನಡತೆಯಲ್ಲಿ ಅಲೆಮಾರಿತನ ಬಿಡಬೇಕು ಎಂದು ಹೇಳಿದರು.

ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ಆರ್‌ಎಸ್‌ಎಸ್ ದೇಶದಲ್ಲಿ ಸಮಾನತೆಗೆ ಶ್ರಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತತ್ವದಲ್ಲಿ ಕೇಂದ್ರ ಸರ್ಕಾರ ಹಿಂದುಳಿದವರ ಕಲ್ಯಾಣಕ್ಕೆ ಯೋಜನೆ ರೂಪಿಸುತ್ತಿದೆ. ಕ್ಷೇತ್ರದಲ್ಲೂ ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ರಾಜಕೀಯ ಮನ್ನಣೆ ನೀಡಲಾಗಿದ್ದು, ಹಿಂದಿನ ಅವಧಿಯಲ್ಲಿ ಅಲೆಮಾರಿ ಬುಡಕಟ್ಟು ಜನಾಂಗದ ಬಿ.ಎಸ್.ಚೈತ್ರಶ್ರೀ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿ ಜಿಪಂ ಅಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ. ಸಮುದಾಯವನ್ನು ಜಾಗತಗೊಳಿಸುವ ಸಲುವಾಗಿ ಆಯೋಜಿಸಿರುವ ಕಾರ್ಯಕ್ರಮದ ಮಹತ್ವ ಪ್ರತಿಯೊಬ್ಬರೂ ಅರ್ಥೈಸಿಕೊಂಡು ಸರ್ವಾಂಗೀಣ ಅಭ್ಯುದಯದತ್ತ ಹೆಜ್ಜೆ ಇಡಬೇಕು ಎಂದರು.

ಮೆರವಣಿಗೆಯಲ್ಲಿ ಹಗರಿಬೊಮ್ಮನಹಳ್ಳಿ ಮಂಜುನಾಥ್ ಹಾಗೂ ಸಿದ್ದಪ್ಪ ಹಾವಿನವರ್ ತಂಡದವರು ಅಲೆಮಾರಿ ಬುಡಕಟ್ಟು ಜನಾಂಗದ ಸುಡಗಾಡು ಸಿದ್ಧರ ವೇಷಭೂಷಣ ಧರಿಸಿ ಗಮನ ಸೆಳೆದರು.

ತುಳಿತಕ್ಕೊಳಗಾದ ಸಮುದಾಯದ ಬಡತನವನ್ನೇ ಮೂಲ ಬಂಡವಾಳವಾಗಿಸಿಕೊಂಡಿರುವ ಅನ್ಯ ಧರ್ಮೀಯರು ಮತಾಂತರ ಪರ್ವ ಆರಂಭಿಸಿದ್ದಾರೆ. ಧಾರ್ಮಿಕತೆಯ ಮೌಲ್ಯ ಹೆಚ್ಚಿಸಿದ, ಸ್ವಾತಂತ್ರತ್ಯದ ಕಿಚ್ಚು ಹಚ್ಚಿದ ಅಲೆಮಾರಿ ಬುಡಕಟ್ಟು ಸಮುದಾಯವನ್ನೇ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಿ ಪ್ರಗತಿ ಸಾಧಿಸಬೇಕಲ್ಲದೆ, ಸಾಮಾಜಿಕ ನ್ಯಾಯ ಪಡೆದುಕೊಳ್ಳಬೇಕು ಎಂದು ಆರ್‌ಎಸ್‌ಎಸ್ ಪ್ರಾಂತ ಸಂಯೋಜಕ ಗುರು ಗಣೇಶ್ ಹೇಳಿದರು.

ಆರ್‌ಎಸ್‌ಎಸ್ ಅಲೆಮಾರಿ ವಿಭಾಗ ಪ್ರಚಾರಕ ಗಾ.ರಾ.ಸುರೇಶ್, ಪ್ರಮುಖರಾದ ಸುನೀಲ್ ಹೆಳವರ್, ಕೆ.ವಿ.ವೀರೇಶ್ ವಿಭೂತಿ, ರಾಘವೇಂದ್ರ ನಾಗೂರ್, ಲಕ್ಷ್ಮ್ಮಣ್ ಕರೇ, ಆರ್.ರೇವಣ್ಣ, ಸಿದ್ದಪ್ಪಾಜಿ, ರಾಜೇಶ್ ಡೊಕ್ಕಣ್ಣನವರ್, ನಾಗಪ್ಪ, ರಾಘವೇಂದ್ರ ಗೋಸಂಕಿ, ಎಂ.ಪ್ರವೀಣ್, ಜಿಪಂ ಮಾಜಿ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ, ತಾಪಂ ಮಾಜಿ ಅಧ್ಯಕ್ಷ ಎಲ್.ಎಸ್.ಶಿವಯೋಗಿ, ಗ್ರಾಪಂ ಮಾಜಿ ಅಧ್ಯಕ್ಷೆ ಬಿ.ಕೆ.ರೂಪಾದೇವಿ, ಹಿಂದೂ ಸಂಘಟಕ ಪಿ.ವಿನಾಯಕ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net