

ಶೃಂಗೇರಿ: ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಜೆಸಿಬಿಎಂ ಕಾಲೇಜಿನ 20 ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ ಟೇಬಲ್ ಟೆನ್ನಿಸ್ ಪ್ರಥಮ ಸ್ಥಾನ, ಶಟಲ್ ಬ್ಯಾಡ್ಮಿಂಟನ್ ಪ್ರಥಮ, 100 ಮೀಟರ್ ಲಾಂಗ್‌ಜಂಪ್ ಪ್ರಥಮ, 200 ಮೀಟರ್ ದ್ವಿತೀಯ, 1500 ಮೀಟರ್ ತೃತೀಯ, 4*100 ರಿಲೇ ದ್ವಿತೀಯ, ಕುಸ್ತಿ ಹಾಗೂ ಕರಾಟೆ ಪ್ರಥಮ, ಕುಸ್ತಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಟೇಬಲ್ ಟೆನ್ನಿಸ್, ಶಟಲ್ ಬ್ಯಾಡ್ಮಿಂಟನ್ ಪ್ರಥಮ, ಹೈಜಂಪ್ ದ್ವಿತೀಯ, ಲಾಂಗ್ ಜಂಪ್, ಯೋಗ, ಹ್ಯಾಮರ್ ಥ್ರೋ, ಟೇಕ್ವಾಂಡೋ ಪ್ರಥಮ ಸ್ಥಾನ ಗಳಿಸಿದ್ದಾರೆ.