ಜನರ ಸಹಕಾರದಿಂದ ಕೊಠಡಿ ನಿರ್ಮಾಣ Construction of the room

ಬೀರೂರಿನ ಪಿಎಂಶ್ರೀ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಬುರ್ಹಾನುದ್ದೀನ್ ಚೋಪ್ದಾರ್, ಗಂಗಣ್ಣ, ಜ್ಯೋತಿ, ಗಿರೀಶ್, ಗುರುಪ್ರಸಾದ್ ಇತರರಿದ್ದರು.
ಬೀರೂರಿನ ಪಿಎಂಶ್ರೀ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಬುರ್ಹಾನುದ್ದೀನ್ ಚೋಪ್ದಾರ್, ಗಂಗಣ್ಣ, ಜ್ಯೋತಿ, ಗಿರೀಶ್, ಗುರುಪ್ರಸಾದ್ ಇತರರಿದ್ದರು.
Published on

ಬೀರೂರು: ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸುವ ಉದ್ದೇಶದಿಂದ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ, ಎಸ್‌ಡಿಎಂಸಿ, ಪಾಲಕರು ಹಾಗೂ ಶಿಕ್ಷಕರ ಸಹಕಾರದಲ್ಲಿ ನೂತನ ಕೊಠಡಿ ನಿರ್ಮಿಸಿರುವುದು ಮಾದರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬುರ್ಹಾನುದ್ದೀನ್ ಚೋಪ್ದಾರ್ ತಿಳಿಸಿದರು.

ಪಿಎಂಶ್ರೀ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳೆಂದರೆ ತಾತ್ಸಾರ ಮನೋಭಾವದಿಂದ ನೋಡುವ ದಿನಗಳಲ್ಲಿ ಸರ್ಕಾರಿ ಶಾಲೆ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೊಠಡಿಗಳ ಕೊರತೆ ಉಂಟಾಗಿತ್ತು. ದಾನಿಗಳ ಸಹಕಾರ ಪಡೆದು ಕೊಠಡಿ ನಿರ್ಮಿಸಿರುವುದು ಉತ್ತಮ ಕಾರ್ಯ ಎಂದರು.

ಮುಖ್ಯಶಿಕ್ಷಕಿ ಅನಸೂಯಮ್ಮ ಮಾತನಾಡಿ, ಶಾಲೆ ಅಭಿವೃದ್ಧಿಯಲ್ಲಿ ಸಮುದಾಯದ ಸಹಭಾಗಿತ್ವ ಮಹತ್ವದ್ದಾಗಿದೆ. ಶಾಲೆ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿಯೂ ಪಾಲಕರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇಸಿಒ ಗಂಗಣ್ಣ, ಸಿಆರ್‌ಪಿ ಜ್ಯೋತಿ, ಹಿರಿಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಗಿರೀಶ್ ದೇವರಮನೆ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಎನ್.ಪ್ರಸನ್ನಕುಮಾರ್, ಕಾರ್ಯದರ್ಶಿ ಗುರುಪ್ರಸಾದ್, ಶಿಕ್ಷಕರಾದ ತಿಪ್ಪೇಶ್, ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net