ಚಂಡಿಕಾ ಹೋಮ ಪೂರ್ಣಾಹುತಿ Chandika Homa Purnahuti

 ಚಂಡಿಕಾ ಹೋಮ ಶುಕ್ರವಾರ ಸಂಪನ್ನಗೊಂಡಿತು.
ಚಂಡಿಕಾ ಹೋಮ ಶುಕ್ರವಾರ ಸಂಪನ್ನಗೊಂಡಿತು.
Published on: 

ಕಳಸ: ಹೊರನಾಡಿನಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಲೋಕ ಕಲ್ಯಾಣಾರ್ಥ ಚಂಡಿಕಾ ಹೋಮ ಶುಕ್ರವಾರ ಸಂಪನ್ನಗೊಂಡಿತು. ಬೆಳಗ್ಗೆ ಸಪ್ತಶತಿ ಪಾರಾಯಣ, ನಾಲ್ಕು ವೇದಗಳ ಪಾರಾಯಣ, ಸುಂದರಕಾಂಡ ಪಾರಾಯಣ, ಶ್ರೀ ದೇವಿ ಭಾಗವತಾ ಪಾರಾಯಣ, ಕುಂಕುಮಾರ್ಚನೆ ಮತ್ತು ಸಪರಿವಾರ ದೇವರುಗಳಿಗೆ ವಿಶೇಷ ಪೂಜೆ ನಡೆದ ಬಳಿಕ ಮಹಾಚಂಡಿಕಾ ಹೋಮ ನಡೆಸಲಾಯಿತು.

ಹೋಮಕುಂಡದಲ್ಲಿ ಪವಿತ್ರ ಅಗ್ನಿಯನ್ನು ಪ್ರಜ್ವಲಿಸಿ, ನವಧಾನ್ಯಗಳು, ಸುಗಂಧ ದ್ರವ್ಯಗಳು, ಔಷಧೀಯ ಸಸ್ಯಗಳು ಮತ್ತು ವಿವಿಧ ಹವನ ದ್ರವ್ಯಗಳ ಪೂರ್ಣಾಹುತಿಯನ್ನು ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ದಂಪತಿ ನೆರವೇರಿಸಿದರು.

ದೇಶದ ಸಮೃದ್ಧಿ, ರೈತರಿಗೆ ಉತ್ತಮ ಬೆಳೆ, ಸಮಾಜದಲ್ಲಿ ಶಾಂತಿ, ಸಾಮರಸ್ಯ, ರೋಗಗಳ ನಿವಾರಣೆ ಮತ್ತು ಸರ್ವ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಬಿ.ಎಸ್.ಶಶಿಕಲಾ ಶ್ರೀಕಂಠ ಪ್ರಸಾದ್ ಮತ್ತು ಶ್ರೀನಿವಾಸ್ ಅವರಿಂದ ಭಕ್ತಿ ಸಂಗೀತ ಹಾಗೂ ರಾತ್ರಿ ನಡೂರು ಮಂದಾರ್ತಿ ಮಹಾಗಣಪತಿ ಯಕ್ಷ ಮಂಡಳಿಯಿಂದ ಯಕ್ಷಗಾನ ನಡೆಯಿತು.

ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮದ ಅಂತಿಮ ದಿನ ಅ.24ರಂದು ಶ್ರೀಮಾತೆಗೆ ಅಭಿಷೇಕ ಮತ್ತು ವಿಶೇಷ ಪೂಜೆ, ನವಗ್ರಹ ಹೋಮ, ಜೀವ-ಭಾವ ಯೋಜನೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಡಿಎಸ್‌ಎಲ್ ಟ್ರಸ್ಟ್ ಶರಣ್ಯ ಅವರಿಗೆ ಶ್ರೀಮಾತಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದಲ್ಲಿ ಉಡುಪಿ ಭಂಡಾರಕೇರಿ ಶ್ರೀ ಸತ್ಯತೀರ್ಥ ಸಂಸ್ಥಾನ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಹೈಕೋರ್ಟ್ ನ್ಯಾಯಾಧೀಶ ಕೆ.ವಿ.ಅರವಿಂದ್, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಎಸ್. ಭಟ್ ಉಪಸ್ಥಿತರಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net