ಕಳವು ನಿಯಂತ್ರಣಕ್ಕೆ ಪೊಲೀಸರಿಗೆ ಸಹಕರಿಸಿ Cooperate police

ಕಡೂರಿನಲ್ಲಿ ಕಳವು ಪ್ರಕರಣಗಳ ನಿಯಂತ್ರಣ ಕ್ರಮಗಳ ಮಾರ್ಗದರ್ಶಿ ಸೂತ್ರದ ಕರಪತ್ರಗಳನ್ನು ಪಿಎಸ್‌ಐಗಳಾದ ಲೀಲಾವತಿ ಮತ್ತು ವಿದ್ಯಾ ಜನರಿಗೆ ಹಂಚಿದರು. ಸಜಿತ್‌ಕುಮಾರ್ ಇತರರಿದ್ದರು.
ಕಡೂರಿನಲ್ಲಿ ಕಳವು ಪ್ರಕರಣಗಳ ನಿಯಂತ್ರಣ ಕ್ರಮಗಳ ಮಾರ್ಗದರ್ಶಿ ಸೂತ್ರದ ಕರಪತ್ರಗಳನ್ನು ಪಿಎಸ್‌ಐಗಳಾದ ಲೀಲಾವತಿ ಮತ್ತು ವಿದ್ಯಾ ಜನರಿಗೆ ಹಂಚಿದರು. ಸಜಿತ್‌ಕುಮಾರ್ ಇತರರಿದ್ದರು.
Published on: 

ಕಡೂರು: ಸಾರ್ವಜನಿಕರ ಆಸ್ತಿ ಭದ್ರತೆಗಾಗಿ ಎಚ್ಚರಿಕೆ ಮಾರ್ಗದರ್ಶಿ ಕ್ರಮಗಳನ್ನು ಬಿಡುಗಡೆ ಮಾಡಲಾಗಿದ್ದು, ಜನರು ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಅಪರಾಧ ವಿಭಾಗದ ಪಿಎಸ್‌ಐ ವಿದ್ಯಾ ತಿಳಿಸಿದರು.

ಹೆಚ್ಚುತ್ತಿರುವ ಮನೆಗಳ್ಳತನ, ಸರಗಳ್ಳತನ ಹಾಗೂ ವಾಹನ ಕಳವು ಪ್ರಕರಣಗಳನ್ನು ತಡೆಗಟ್ಟಲು ವಿವಿಧ ಬಡಾವಣೆಗಳಲ್ಲಿ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರದ ಕರಪತ್ರಗಳನ್ನು ಜನರಿಗೆ ಹಂಚಿ ಮಾತನಾಡಿದರು.

ಕುಟುಂಬಸ್ಥರು ಪ್ರವಾಸ ಅಥವಾ ದೂರದ ಊರುಗಳಿಗೆ ತೆರಳುವಾಗ ಮನೆಯ ಗೇಟ್ ಅಥವಾ ಬಾಗಿಲಿಗೆ ಹೊರಗಿನಿಂದ ಕಾಣುವಂತೆ ದೊಡ್ಡ ಬೀಗಗಳನ್ನು ಹಾಕದೆ ಇಂಟರ್‌ಲಾಕ್ ವ್ಯವಸ್ಥೆ ಮಾಡಿಸಬೇಕು. ಹಣ ಮತ್ತು ಆಭರಣಗಳನ್ನು ಬ್ಯಾಂಕ್ ಲಾಕರ್‌ಗಳಲ್ಲಿ ಇಡುವುದು ಸುರಕ್ಷಿತ. ದೀರ್ಘಾವಧಿ ಹೊರಗೆ ಹೋಗುವ ಸಂದರ್ಭದಲ್ಲಿ ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.

ಟ್ರಾಫಿಕ್ ವಿಭಾಗದ ಪಿಎಸ್‌ಐ ಲೀಲಾವತಿ ಮಾತನಾಡಿ, ಮನೆಗಳ ರಕ್ಷಣೆಗೆ ಬರ್ಗಲರ್ ಅಲಾರ್ಮ್, ಉತ್ತಮ ಗುಣಮಟ್ಟದ ಸಿಸಿಟಿವಿ ಹಾಗೂ ಸೆನ್ಸರ್ ಲೈಟ್‌ಗಳನ್ನು ಅಳವಡಿಸಿಕೊಳ್ಳುವಂತೆ, ಬಸ್ ನಿಲ್ದಾಣಗಳು, ಸಾರ್ವಜನಿಕ ಸಾರಿಗೆ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ನೂಕುನುಗ್ಗಲು ಉಂಟಾದಾಗ ಮೊಬೈಲ್, ಆಭರಣ ಮತ್ತು ಪರ್ಸ್‌ಗಳ ಬಗ್ಗೆ ನಿಗಾವಹಿಸಬೇಕು ಎಂದರು.

ಪೊಲೀಸರು ಎಂದು ನಕಲಿ ಗುರುತಿನ ಚೀಟಿ ನೀಡಿ, ವಯೋವೃದ್ಧರನ್ನು ಹೆದರಿಸಿ ಆಭರಣ ದೋಚುವವರ ಜಾಲದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಲಾಗಿದೆ ಎಂದರು.

ಪಿಎಸ್‌ಐ ಸಜಿತ್‌ಕುಮಾರ್ ಮಾತನಾಡಿ, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net