ಇನ್‌ಸ್ಟ್ಟಾಗ್ರಾಮ್‌ನಲ್ಲಿ ಶಾಸಕರ ಅವಹೇಳನ MLA disparaged on Instagram

ಬಾಳೆಹೊನ್ನೂರು ಠಾಣೆಯಲ್ಲಿ ಪಿಎಸ್‌ಐ ಅಂಬರೀಷ್‌ಗೆ ಬಾಸಾಪುರದ ಮನೋಜ್‌ಕುಮಾರ್ ದೂರು ನೀಡಿದರು.
ಬಾಳೆಹೊನ್ನೂರು ಠಾಣೆಯಲ್ಲಿ ಪಿಎಸ್‌ಐ ಅಂಬರೀಷ್‌ಗೆ ಬಾಸಾಪುರದ ಮನೋಜ್‌ಕುಮಾರ್ ದೂರು ನೀಡಿದರು.
Published on: 

ಬಾಳೆಹೊನ್ನೂರು: ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಇನ್‌ಸ್ಟ್ಟಾಗ್ರಾಮ್ ಖಾತೆಯಲ್ಲಿ ಅವಹೇಳನ ಮಾಡಿ, ಬೆದರಿಕೆ ಹಾಕಿರುವವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಾಸಾಪುರದ ಮನೋಜ್‌ಕುಮಾರ್ ಎಂಬುವರು ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಇತ್ತೀಚೆಗೆ ನಡೆದ ಚಿಕ್ಕಮಗಳೂರಿನ ಕೆಡಿಪಿ ಸಭೆಯಲ್ಲಿ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯುವಾಗ ಎಂಎಲ್ಸಿ ಸಿ.ಟಿ.ರವಿ ಮತ್ತು ಶಾಸಕ ಟಿ.ಡಿ.ರಾಜೇಗೌಡ ಅವರ ಮಾತುಕತೆಯ ಕುರಿತು ಪುನೀತ್ ಕೃಷ್ಣ ಆಂಬುಲೆನ್ಸ್ ಸಿಕೆಎಂ ಎಂಬ ಇನ್‌ಸ್ಟ್ಟಾಗ್ರಾಮ್ ಪೇಜ್‌ನಲ್ಲಿ ಅವಹೇಳನ ಮಾಡಿ ಬೆದರಿಕೆ ಹಾಕಿದ್ದಾನೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net