ಅರ್ಹರ ಹೆಸರು ಮರುಸೇರ್ಪಡೆಗೊಳಿಸಿ Reinstate the names

ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು ತಹಸೀಲ್ದಾರ್ ಎಸ್.ಅಶ್ವಿನಿಗೆ ಮನವಿ ಸಲ್ಲಿಸಿದರು. ಮಂಜೇಗೌಡ,  ಬಿ.ಎಸ್.ಜಯರಾಂ, ರವಿ ಕುನ್ನಳ್ಳಿ ಮತ್ತಿತರರಿದ್ದರು.
ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು ತಹಸೀಲ್ದಾರ್ ಎಸ್.ಅಶ್ವಿನಿಗೆ ಮನವಿ ಸಲ್ಲಿಸಿದರು. ಮಂಜೇಗೌಡ, ಬಿ.ಎಸ್.ಜಯರಾಂ, ರವಿ ಕುನ್ನಳ್ಳಿ ಮತ್ತಿತರರಿದ್ದರು.
Published on: 

ಮೂಡಿಗೆರೆ: ಎಸ್‌ಐಆರ್ ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ.ಮಂಜೇಗೌಡ ಆರೋಪಿಸಿದರು.

ಶುಕ್ರವಾರ ಬ್ಲಾಕ್ ಕಾಂಗ್ರೆಸ್‌ನಿಂದ ತಾಲೂಕು ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ವಾಮ ಮಾರ್ಗದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ಮೂಲಕ ತೆಗೆಸುತ್ತಿದೆ. ಇದರಿಂದ ರಾಜ್ಯದಲ್ಲಿ ಸುಮಾರು 95 ಲಕ್ಷ ಮತದಾರರು ಸೇರಿದಂತೆ ದೇಶದಲ್ಲಿ 13 ಕೋಟಿಗೂ ಅಧಿಕ ಅರ್ಹ ಮತದಾರರು ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಇದರ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿ ಹೋರಾಟ ನಡೆಯುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡ ಬಿ.ಎಸ್.ಜಯರಾಂ ಗೌಡ ಮಾತನಾಡಿ, ತಪ್ಪಾಗಿ ಮತದಾರರ ಪಟ್ಟಿಯಿಂದ ಕೈಬಿಡಲಾದ ಅರ್ಹ ನಾಗರಿಕರ ಹೆಸರುಗಳನ್ನು ಮರುಸೇರ್ಪಡೆಗೊಳಿಸಬೇಕು. ರಾಷ್ಟ್ರಪತಿ ಮಧ್ಯಪ್ರವೇಶಿಸಿ, ಅರ್ಹ ನಾಗರಿಕರ ಮತದಾನದ ಹಕ್ಕು ಮತ್ತು ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಕುನ್ನಳ್ಳಿ, ಹಿರಿಯ ಮುಖಂಡ ಡಿ.ಎಸ್.ರಘು, ಅಶ್ವತ್ಥ್ ಮಾಕೋನಹಳ್ಳಿ, ಅಯೂಬ್ ಹಾಜಿ, ಸಂಪತ್‌ಕುಮಾರ್, ಚಂದ್ರು ಒಡೆಯರ್, ಸುರೇಂದ್ರ ಉಗ್ಗೇಹಳ್ಳಿ, ಸುಧೀರ್ ಚಕ್ರಮಣಿ, ಹರೀಶ್ ಸಬ್ಬೇನಹಳ್ಳಿ, ಅನಿಲ್ ಛತ್ರಮೈಧಾನ, ದೀಕ್ಷಿತ್ ಅಬಚೂರು, ಸುಬೋದ್, ಸುಬ್ರಹ್ಮಣ್ಯ, ನಿಶಾಂತ್ ಪಟೇಲ್, ಬಿ.ಕೆ.ಜಯಮ್ಮ, ಆಶಾ, ಕೋಮಲಾ, ಬಿಂದು, ಜಾನಕಿ, ಗೀತಾ, ಸುಶೀಲಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net