ಅಧಿಕಾರಿಗಳು, ಸಿಬ್ಬಂದಿಯಿಂದ ವನ್ಯಜೀವಿ ಸಂರಕ್ಷಣೆ Wildlife conservation

 ಜೈಪುರ ಗ್ರಾಮದಲ್ಲಿ ಬಟ್ಟೆ ಹೊಲಿಗೆ ತರಬೇತಿ ಕೇಂದ್ರಕ್ಕೆ ಚಿಕ್ಕಮಗಳೂರು ಭದ್ರಾ ವನ್ಯಜೀವಿ ಉಪ ಸಂರಕ್ಷಣಾಧಿಕಾರಿ ಪುಲ್ಕೀತ್ ಮೀನಾ ಭೇಟಿ ನೀಡಿದರು. ಸಂತೋಷ್ ಸಾಗರ್, ಬಿ.ಸುಧಾಕರ್, ಕೆ.ಪಿ.ಪ್ರದೀಪ್ ಇತರರಿದ್ದರು.
ಜೈಪುರ ಗ್ರಾಮದಲ್ಲಿ ಬಟ್ಟೆ ಹೊಲಿಗೆ ತರಬೇತಿ ಕೇಂದ್ರಕ್ಕೆ ಚಿಕ್ಕಮಗಳೂರು ಭದ್ರಾ ವನ್ಯಜೀವಿ ಉಪ ಸಂರಕ್ಷಣಾಧಿಕಾರಿ ಪುಲ್ಕೀತ್ ಮೀನಾ ಭೇಟಿ ನೀಡಿದರು. ಸಂತೋಷ್ ಸಾಗರ್, ಬಿ.ಸುಧಾಕರ್, ಕೆ.ಪಿ.ಪ್ರದೀಪ್ ಇತರರಿದ್ದರು.
Published on: 

ಲಿಂಗದಹಳ್ಳಿ: ಹುಲಿ ಸಂರಕ್ಷಿತ ಪ್ರದೇಶವಾಗಿ ಭದ್ರಾ ಅಭಯಾರಣ್ಯ ಅಸ್ತಿತ್ವಕ್ಕೆ ಬಂದ ನಂತರ ಅಭಯಾರಣ್ಯದ ವ್ಯಾಪ್ತಿಯಲ್ಲಿ ವನ್ಯಪ್ರಾಣಿ, ಪಕ್ಷಿಗಳ ಸಂತತಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಭದ್ರಾ ವನ್ಯಜೀವಿ ಅರಣ್ಯದ ಅಧಿಕಾರಿ, ಸಿಬ್ಬಂದಿ ಕಟ್ಟುನಿಟ್ಟಿನ ಕಾರ್ಯಗಳಿಂದ ರಕ್ಷಣೆ ಸಿಕ್ಕಿದೆ ಎಂದು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ನಿರ್ದೇಶಕ, ಉಪ ಸಂರಕ್ಷಣಾಧಿಕಾರಿ ಪುಲ್ಕೀತ್ ಮೀನಾ ಹೇಳಿದರು.

ಭದ್ರಾ ವನ್ಯಜೀವಿ ತಣಿಗೆಬೈಲು ವಲಯಾರಣ್ಯದಿಂದ ಜೈಪುರ ಗ್ರಾಮದಲ್ಲಿ ನಿರ್ಮಿಸಿರುವ ಮಹಿಳೆಯರಿಗೆ ಹೊಲಿಗೆ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯಿಂದ ಮಹಿಳೆಯರಿಗೆ ನೀಡುತ್ತಿರುವ ಉಚಿತ ಹೊಲಿಗೆ ತರಬೇತಿ ವೀಕ್ಷಿಸಿ ಮಾತನಾಡಿ, ಅಗತ್ಯವುಳ್ಳ ಮಹಿಳೆಯರು ಹೊಲಿಗೆ ತರಬೇತಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಲಕ್ಕವಳ್ಳಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಸಾಗರ್ ಮಾತನಾಡಿ, ಭದ್ರಾ ವನ್ಯಜೀವಿ ಅರಣ್ಯದಿಂದ ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್‌ಗಳ ವಿತರಣೆ, ಸ್ಟವ್ ವಿತರಣೆ, ವಿವಿಧ ಶಾಲಾ ಕಾಂಪೌಂಡ್‌ಗಳ ನಿರ್ಮಾಣ, ವಿದ್ಯಾರ್ಥಿಗಳ ಪಠ್ಯ ಚಟುವಟಿಕೆ ಹಾಗೂ ಪಠ್ಯತೇರ ಚಟುವಟಿಕೆಗಳಿಗಾಗಿ ಅಗತ್ಯ ಅನುದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಭದ್ರಾ ವನ್ಯಜೀವಿ ತಣಿಗೆಬೈಲು ವಲಯಾರಣ್ಯಾಧಿಕಾರಿ ಬಿ.ಸುಧಾಕರ್, ಉಪ ವಲಯಾರಣ್ಯಾಧಿಕಾರಿಗಳಾದ ಕೆ.ಪಿ.ಪ್ರದೀಪ್, ರಾಕೇಶ್, ಗಸ್ತು ಅರಣ್ಯ ಪಾಲಕ ಎಲ್.ಜಿ.ಪ್ರದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net