ಪುಸ್ತಕ ಓದುವುದರಿಂದ ವಿಶ್ವ ಜ್ಞಾನ ಲಭ್ಯ

ಬಾಳೆಹೊನ್ನೂರಿನ ಗ್ರಾಪಂನ ಡಿಜಿಟಲ್ ಗ್ರಂಥಾಲಯ ಮತ್ತು ಅರಿವು ಕೇಂದ್ರಕ್ಕೆ ವಿವಿಧ ಪುಸ್ತಕಗಳನ್ನು ನೀಡಲಾಯಿತು.
ಬಾಳೆಹೊನ್ನೂರಿನ ಗ್ರಾಪಂನ ಡಿಜಿಟಲ್ ಗ್ರಂಥಾಲಯ ಮತ್ತು ಅರಿವು ಕೇಂದ್ರಕ್ಕೆ ವಿವಿಧ ಪುಸ್ತಕಗಳನ್ನು ನೀಡಲಾಯಿತು.
Published on
ಬಾಳೆಹೊನ್ನೂರು: ಪುಸ್ತಕಗಳು ಜ್ಞಾನಾರ್ಜನೆಗೆ ಪೂರಕವಾಗಿದ್ದು, ಪುಸ್ತಕಗಳಿಂದ ವಿಶ್ವ ಜ್ಞಾನ ದೊರೆಯುತ್ತದೆ ಎಂದು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚೈತನ್ಯ ವೆಂಕಿ ಹೇಳಿದರು.
ಪಟ್ಟಣದ ಗ್ರಾಪಂನ ಡಿಜಿಟಲ್ ಗ್ರಂಥಾಲಯ ಮತ್ತು ಅರಿವು ಕೇಂದ್ರಕ್ಕೆ ಜ್ಯೂನಿಯರ್ ಜೇಸಿ ಮಾಜಿ ಅಧ್ಯಕ್ಷ ಆರ್ಯನ್ ತೇಜಸ್ ಜನ್ಮದಿನದ ಅಂಗವಾಗಿ ವಿವಿಧ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ಪುಸ್ತಕಗಳಲ್ಲಿ ಅಪಾರ ವಿಶ್ವಜ್ಞಾನ ಅಡಗಿದ್ದು, ಯುವಕರು, ವಿದ್ಯಾರ್ಥಿಗಳು ನಿರಂತರ ಪುಸ್ತಕ ಓದುವುದರಿಂದ ಅಪಾರ ಜ್ಞಾನ ಲಭ್ಯವಾಗಲಿದೆ. ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಪುಸ್ತಕಗಳನ್ನು ಓದಿದರೆ ಹಲವಾರು ಮಾಹಿತಿಗಳು ನಮಗೆ ತಿಳಿಯಲಿದೆ. ಮಕ್ಕಳಲ್ಲಿ ಜ್ಞಾನ ಮತ್ತು ಕ್ರಿಯಾಶೀಲತೆಗಾಗಿ ಪುಸ್ತಕಗಳ ಅಧ್ಯಯನ ಅವಶ್ಯಕ ಎಂದರು.
ಜೇಸಿಐ ನಿಕಟಪೂರ್ವ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಸರ್ಕಾರ ಮಕ್ಕಳಿಗಾಗಿ ಬೇಸಿಗೆ ಬೆಸುಗೆ ಶಿಬಿರ ಆರಂಭಿಸಿರುವುದು ಉತ್ತಮವಾಗಿದೆ. ಗ್ರಂಥಾಲಯ, ಅರಿವು ಕೇಂದ್ರಗಳಲ್ಲಿ ಇದನ್ನು ಆಯೋಜಿಸಿರುವುದರಿಂದ ಮಕ್ಕಳಿಗೆ ಒಳ್ಳೆಯ ಜ್ಞಾನಾರ್ಜನೆಯಾಗಲಿದೆ. ಬೇಸಿಗೆ ರಜೆ ಸಂದರ್ಭದಲ್ಲಿ ಬೇಸಿಗೆ ಬೆಸುಗೆ ಶಿಬಿರ ಆಯೋಜಿಸಿದ್ದು, ಮಕ್ಕಳು ಹಲವರೊಂದಿಗೆ ಬೆರೆತು ವಿವಿಧ ವಿಚಾರಗಳನ್ನು ಕಲಿಯುವ ಜತೆಗೆ ಮೌಲ್ಯಯುತ ಶಿಕ್ಷಣವನ್ನು ಪಡೆಯಲಿದ್ದಾರೆ ಎಂದರು.
ಜೇಸಿಐ ಪೂರ್ವಾಧ್ಯಕ್ಷ ಎಚ್.ಗೋಪಾಲ್, ಸುಧಾಕರ್, ಎನ್.ಶಶಿಧರ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷಭಟ್, ಗ್ರಾಪಂ ಕಾರ್ಯದರ್ಶಿ ರಾಮಪ್ಪ, ಗ್ರಂಥಾಲಯ ಮೇಲ್ವಿಚಾರಕಿ ಲಕ್ಷ್ಮಿ, ಅಂಗನವಾಡಿ ಮೇಲ್ವಿಚಾರಕಿ ಉಷಾ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net