ಶಿಕ್ಷಕರ ಮೇಲೆ ಹೆಚ್ಚುತ್ತಿದೆ ಕಾರ್ಯದ ಒತ್ತಡ

ಆಲ್ದೂರಲ್ಲಿ ಆಯೋಜಿಸಿದ್ದ ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟವನ್ನು ಮಾಜಿ ಶಾಸಕ ನಿಂಗಯ್ಯ ಉದ್ಘಾಟಿಸಿದರು. ಸುಂದರೇಶ್, ರುದ್ರಪ್ಪ, ಕುಮಾರಸ್ವಾಮಿ ಇದ್ದರು.
ಆಲ್ದೂರಲ್ಲಿ ಆಯೋಜಿಸಿದ್ದ ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟವನ್ನು ಮಾಜಿ ಶಾಸಕ ನಿಂಗಯ್ಯ ಉದ್ಘಾಟಿಸಿದರು. ಸುಂದರೇಶ್, ರುದ್ರಪ್ಪ, ಕುಮಾರಸ್ವಾಮಿ ಇದ್ದರು.
Published on
ಆಲ್ದೂರು: ಕ್ರೀಡಾಕೂಟ ಆಯೋಜನೆ, ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಸಲು ಸರ್ಕಾರ ಕೊಡುವ ಅನುದಾನ ಕಡಿಮೆ ಇದ್ದು, ಶಿಕ್ಷಕರು ದಾನಿಗಳ ನೆರವಿನಿಂದ ಕಾರ್ಯಕ್ರಮ ಆಯೋಜನೆ ಮಾಡುವ ಪರಿಸ್ಥತಿ ನಿರ್ಮಾಣವಾಗಿದೆ ಎಂದು ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಸುಂದರೇಶ್ ಅಸಮಧಾನ ವ್ಯಕ್ತಪಡಿಸಿದರು.
ಪಟ್ಟಣದ ಪೂರ್ಣಪ್ರಜ್ಞಾ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿ, ಶಿಕ್ಷಕರಿಗೆ ಪಾಠ ಮಾಡುವುದು ಮರೆತು ಹೋಗಿದೆ. ಮೊಟ್ಟೆ ಲೆಕ್ಕ, ಮಕ್ಕಳ ಹಾಜರಾತಿ, ಎಸ್‌ಐಆರ್ ವರದಿಗೆ ಶಿಕ್ಷಕರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ದೂರಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಮಾತನಾಡಿ, ದೈಹಿಕವಾಗಿ ಸದೃಢರಾಗಿರುವ ವಿದ್ಯಾರ್ಥಿಗಳು ಓದಿನಲ್ಲೂ ಮುಂದಿರುತ್ತಾರೆ. ಪ್ರಸ್ತುತ ಕ್ರೀಡೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಈ ಹಿಂದೆ ಶಾಲೆಯಿಂದ ಬಂದು ಆಟದ ಮೈದಾನಕ್ಕೆ ಇಳಿಯುತ್ತಿದ್ದರು. ಇಂದು ಶಾಲೆಯಿಂದ ಬಂದು ಅಪ್ಪ,ಅಮ್ಮನ ಮೊಬೈಲ್ ಹುಡುಕುತ್ತಿದ್ದಾರೆ. ಮಕ್ಕಳಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿರುವ ಕಾರಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಮಾಜಿ ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಕ್ರೀಡೆ ಶಿಕ್ಷಣದ ಒಂದು ಭಾಗ. ಕ್ರೀಡೆಗಳಿಗೂ ಇಂದು ಹೆಚ್ಚಿನ ಮಹತ್ವವಿದ್ದು, ವಿದ್ಯಾರ್ಥಿಗಳು ಹೆಚ್ಚು ಕ್ರೀಡೆ ತೊಡಗಿಸಿಕೊಳ್ಳಬೇಕು, ಮೊಬೈಲ್‌ನಿಂದ ದೂರ ಇದ್ದಾಗ ಮಾತ್ರ ಸಾಧಕರಾಗಲು ಸಾಧ್ಯ ಎಂದರು.
ಆಲ್ದೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಡಿ.ಬಿ ಆಶೋಕ್, ಪುಷ್ಬಾವತಿ, ಜಯರಾಮೇಗೌಡ, ಗೀತಾ, ಸುಂದರೇಶ್, ರೂಪ, ಕೆಂಚೇಗೌಡ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ ಸ್ವಾಮಿ, ಪೂರ್ಣ ಪ್ರಜ್ಞಾ ಶಾಲೆ ಮುಖ್ಯ ಶಿಕ್ಷಕ ವೆಂಕಟೇಶ್, ಸಿಆರ್‌ಪಿ ಕಮಲ, ಎಸ್‌ಡಿಎಂಸಿ ಅಧ್ಯಕ್ಷ ಕಲಾವತಿ, ಇಬ್ರಾಹಿಂ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net