ಸಾಹಿತ್ಯ, ಕಲೆಗೆ ಮಹಿಳೆಯರ ಕೊಡುಗೆ ಅನನ್ಯ

ಗೇರಿಯಲ್ಲಿ ತಾಲೂಕು ಕಸಾಪ ಮಹಿಳಾ ಘಟಕ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಕಲಾ ರಮೇಶ್, ಸುಚಿತ್ರಾ, ಮಧುಮತಿ, ವನಜಾಕ್ಷಿ, ಲಲಿತಮ್ಮ, ನೇತ್ರಾವತಿ, ಸುಜಾತಾ ಇದ್ದರು.
ಗೇರಿಯಲ್ಲಿ ತಾಲೂಕು ಕಸಾಪ ಮಹಿಳಾ ಘಟಕ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಕಲಾ ರಮೇಶ್, ಸುಚಿತ್ರಾ, ಮಧುಮತಿ, ವನಜಾಕ್ಷಿ, ಲಲಿತಮ್ಮ, ನೇತ್ರಾವತಿ, ಸುಜಾತಾ ಇದ್ದರು.
Published on
ಶೃಂಗೇರಿ: ಜೀವನಾನುಭವದ ಅಭಿವ್ಯಕ್ತಿಯೇ ಸಾಹಿತ್ಯ. ಸಾಹಿತ್ಯದ ಚಿಂತನೆಗಳು ಭಕ್ತಿಪಥದಲ್ಲಿ ಪ್ರಾರಂಭವಾಯಿತು ಎಂದು ಧಾರ್ಮಿಕ ಚಿಂತಕಿ ಶೈಲಜಾ ಶ್ರೀಧರಮೂರ್ತಿ ತಿಳಿಸಿದರು. ತಾಲೂಕು ಕಸಾಪ ಮಹಿಳಾ ಘಟಕ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಎಸ್.ವಿ.ರಾಮಚಂದ್ರ ಭಟ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತ್ಯದಲ್ಲಿ ಮಹಿಳೆಯರ ಚಿಂತನೆ-ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸ್ಥಾನ ಕುರಿತು ಉಪನ್ಯಾಸ ನೀಡಿದರು.
ಮಾನವನ ಅನುಭವಗಳು, ಆಲೋಚನೆಗಳು, ಭಾವನೆಗಳು ಹಾಗೂ ಕಲ್ಪನೆಗಳನ್ನು ಭಾಷೆಯ ಮೂಲಕ ಅಭಿವ್ಯಕ್ತಿಗೊಳಿಸುವ ಕಲಾತ್ಮಕ ರೂಪಕವೇ ಸಾಹಿತ್ಯ. ಸಾಹಿತ್ಯ, ಕಲೆ, ಸಂಸ್ಕೃತಿಗೆ ಮಹಿಳೆಯರು ನೀಡಿದ ಕೊಡುಗೆ ಅನನ್ಯ. ಪ್ರಸ್ತುತ ಕೇವಲ ನಾಲ್ಕು ಗೋಡೆಗೆ ಮಹಿಳೆಯರ ಸಾಹಿತ್ಯ ಸೀಮಿತಗೊಳ್ಳದೆ ಸೀವಾದ ಚಿಂತನೆಗಳ ಮೂಲಕ ಸಾಗಿ ಮಹಿಳೆ ಅಬಲೆಯಲ್ಲ. ಆಕೆ ತನ್ನ ಅಸ್ಮಿತೆಯ ಹೆಗ್ಗುರುತುಗಳನ್ನು ಸಾಹಿತ್ಯದ ಮೂಲಕ ಪರಿಮೂಡಿಸಬಲ್ಲಳು ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೌಟುಂಬಿಕ ವ್ಯವಸ್ಥೆಯಲ್ಲಿ ನಾನಾ ಪಾತ್ರಗಳನ್ನು ವಹಿಸಿಕೊಂಡ ಆಕೆ ಜವಾಬ್ದಾರಿಯುತವಾಗಿ ಸಮಾಜದಲ್ಲಿ ತನ್ನ ಸೃಜನಶೀಲತೆ ಮೂಲಕ ಸಮಾಜಕ್ಕೆ ಸುಸಂಸ್ಕೃತ ಮೌಲ್ಯಗಳನ್ನು ನೀಡಿದ್ದಾಳೆ ಎಂದರು.
ಕಾರ್ಯಕ್ರಮವನ್ನು ಕಸಾಪ ಅಧ್ಯಕ್ಷ ಆಗುಂಬೆ ಗಣೇಶ್ ಹೆಗಡೆ ಉದ್ಘಾಟಿಸಿದರು. ಮಹಿಳಾ ದಿನಾಚರಣೆ ಅಂಗವಾಗಿ ಜಾನಪದ ನೃತ್ಯ, ವೈಯಕ್ತಿಕ ಗೀತೆ, ರಂಗವಲ್ಲಿ, ಗೆಜ್ಜೆವಸ ತಯಾರಿಕೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಗೌರವಿಸಲಾಯಿತು. ಕಸಾಪ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗಡೆ, ಜಿಲ್ಲಾ ಕಸಾಪ ಪ್ರಧಾನ ಸಂಚಾಲಕ ಎಚ್.ಎಸ್.ಸುಬ್ರಹ್ಮಣ್ಯ, ಹೋಬಳಿ ಅಧ್ಯಕ್ಷ ದಿನೇಶ್ ಅಂಗುರ್ಡಿ, ಕೂಳಗದ್ದೆ ಪ್ರದೀಪ್, ಪ್ರಧಾನ ಕಾರ್ಯದರ್ಶಿ ಜ್ಯೋತಿ ಮಂಜುನಾಥ್, ಸುಮಿತ್ರಾ ಸೋಮಶೇಖರ್, ತಾಲೂಕು ಕಜಾಪ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ತಿಮ್ಮಪ್ಪ, ನಗರ ಘಟಕದ ಅಧ್ಯಕ್ಷೆ ಸೌಮ್ಯಾ ವಿಜಯ್‌ಕುಮಾರ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net