ಕಡೂರಿನ ಹಿರೇನಲ್ಲೂರು, ಮೇಲನಹಳ್ಳಿ ಕೆರೆಗಳಿಗೆ ಶೀಘ್ರದಲ್ಲಿ ನೀರು

 ಕಡೂರು ತಾಲೂಕಿನ ಕೇದಿಗೆರೆ ಗ್ರಾಮದಲ್ಲಿ ಸಾರ್ವಜನಿಕ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು. ಪುಟ್ಟಪ್ಪ, ಅಶೋಕ್, ಶಿವು, ಅಶ್ವಿನಿ ಮತ್ತಿತರಿದ್ದರು.
ಕಡೂರು ತಾಲೂಕಿನ ಕೇದಿಗೆರೆ ಗ್ರಾಮದಲ್ಲಿ ಸಾರ್ವಜನಿಕ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು. ಪುಟ್ಟಪ್ಪ, ಅಶೋಕ್, ಶಿವು, ಅಶ್ವಿನಿ ಮತ್ತಿತರಿದ್ದರು.
Published on: 

ಕಡೂರು: ಭದ್ರಾ ಉಪಕಣಿವೆ ಯೋಜನೆಯ ಮೂರನೇ ಹಂತದ ಕಾಮಗಾರಿಗೂ ಚಾಲನೆ ನೀಡಲಾಗಿದ್ದು, ಈ ಭಾಗದ ಹಿರೇನಲ್ಲೂರು, ಮೇಲನಹಳ್ಳಿ ಕೆರೆಗಳಿಗೆ ಇನ್ನೆರಡು ದಿನಗಳಲ್ಲಿ ಈ ಕೆರೆಗಳಿಗೆ ಪ್ರಾಯೋಗಿಕವಾಗಿ ಭದ್ರಾ ನೀರು ಹರಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕೇದಿಗೆರೆ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕೇದಿಗೆರೆಯ ಕಟ್ಟೆಗಳಿಗೂ ಭದ್ರಾ ನೀರು ಹರಿಸಲಾಗುತ್ತದೆ. ಇದು ಯಶಸ್ವಿಯಾದರೆ ಈ ಭಾಗದ ರೈತರಿಗೆ ನೆಮ್ಮದಿ ದೊರೆಯುತ್ತದೆ ಎಂದರು.

ಗ್ರಾಮದಲ್ಲಿ ನಿರ್ಮಾಣವಾಗುವ ಸಾರ್ವಜನಿಕ ಸಮುದಾಯ ಭವನ ನಿರ್ಮಾಣಕ್ಕೆ ಸುಮಾರು 60 ಲಕ್ಷ ರೂ. ಅನುದಾನ ನೀಡಲಾಗುವುದು. ಈ ಸಮುದಾಯ ಭವನ ಎಲ್ಲ ವರ್ಗಗಳಿಗೂ ಸೇರಿದೆ. ಕೆಲವರ ಚಿತಾವಣೆಗೆ ಸಮುದಾಯ ಭವನ ನಿರ್ಮಾಣ ಕಾಮಗಾರಿ ವಿಳಂಬವಾಗಬಾರದು. ಯಾವುದೇ ತೊಂದರೆಯಾಗದಂತೆ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಪೊಲೀಸ್ ಸರ್ಪಗಾವಲಿನಲ್ಲಿ ಶಂಕುಸ್ಥಾಪನೆ

ತಾಲೂಕಿನ ಕೇದಿಗೆರೆ ಗ್ರಾಮದಲ್ಲಿ ಸುಮಾರು 15 ಲಕ್ಷ ರೂ.ವೆಚ್ಚದಡಿ ಸಾರ್ವಜನಿಕ ಸಮುದಾಯ ಭವನ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯೋರ್ವರು ಇಲ್ಲಿನ ಜಾಗದಲ್ಲಿ ಸಾರ್ವಜನಿಕ ಸಮುದಾಯ ಭವನ ನಿರ್ಮಿಸಬಾರದು, ಈ ಹಿಂದೆ ಇದೇ ಜಾಗದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಪ್ರಯತ್ನಿಸಿದಾಗ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಅದರಂತೆ ಈಗಲೂ ಸಾರ್ವಜನಿಕ ಸಮುದಾಯ ಭವನ ನಿರ್ಮಾಣಕ್ಕೆ ನಮ್ಮ ವಿರೋಧವಿದೆ ಗ್ರಾಮದಲ್ಲಿ ನ್ಯಾಯ ಕಲ್ಪಿಸಿಕೊಡಿ ಎಂದು ಪೊಲೀಸರ ದುರು ಪ್ರತಿಭಟನೆಗೆ ಮುಂದಾದು. ಶಂಕುಸ್ಥಾಪನೆ ಕಾರ್ಯಕ್ಕೆ ಅಡ್ಡಿಯಾಗದಂತೆ ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ಭೂಮಿ ಪೂಜೆ ನಡೆಯಿತು.

ಕೇದಿಗೆರೆ ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಕೆಲ ಬೇಡಿಕೆಗಳ ಪಟ್ಟಿಯನ್ನು ಶಾಸಕರಿಗೆ ನೀಡಿದರು. ಡಿವೈಎಸ್ಪಿ ಪರಶುರಾಮಪ್ಪ, ಸಿಪಿಐ ಹಾಲಪ್ಪ, ಪಿಎಸ್‌ಐಗಳಾದ ಸಚಿತ್ ಕುಮಾರ್, ಧನಂಜಯ್, ಲೀಲಾವತಿ, ಶಾಹಿದ್ ಅಪ್ರಿದಿ, ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ವಕೀಲ ಕೇದಿಗೆರೆ ಶಿವಕುಮಾರ್, ಶೇಖರಪ್ಪ, ಪುಟ್ಟಪ್ಪ, ಕೇದಿಗೆರೆ ಓಂಕಾರ್, ಗ್ರಾಪಂ ಮಾಜಿ ಅಧ್ಯಕ್ಷೆ ಭಾರತಿ, ಭೂಸೇನಾ ನಿಗಮದ ಎಇಇ ಆಶ್ವಿನಿ, ಗಿರೀಶ್, ಗ್ರಾಪಂ ಆಡಳಿತಾಧಿಕಾರಿ ದೇವರಾಜ್, ಪಿಡಿಒ ದಯಾನಂದ್ ಇದ್ದರು.