ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಜಿಲ್ಲಾಡಳಿತಕ್ಕೆ ಗ್ರಾಮಸ್ಥರ ಮನವಿ

ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರಿಗೆ ಮನವಿ ಸಲ್ಲಿಸಿದ ಚಿಕ್ಕಹಳ್ಳ ಮತ್ತು ಸತ್ತಿಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ರಸ್ತೆ ಸಂಪರ್ಕ ಕ ಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ರಮೇಶ್, ಹೂವೇಗೌಡ, ದೀಕ್ಷಿತ್, ಪ್ರಮೋದ್, ಆಕಾಶ್, ಮುರಳಿ ಮತ್ತಿತರರಿದ್ದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರಿಗೆ ಮನವಿ ಸಲ್ಲಿಸಿದ ಚಿಕ್ಕಹಳ್ಳ ಮತ್ತು ಸತ್ತಿಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ರಸ್ತೆ ಸಂಪರ್ಕ ಕ ಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ರಮೇಶ್, ಹೂವೇಗೌಡ, ದೀಕ್ಷಿತ್, ಪ್ರಮೋದ್, ಆಕಾಶ್, ಮುರಳಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಲ್ದೂರು ಹೋಬಳಿಯ ಚಿಕ್ಕಹಳ್ಳ ಮತ್ತು ಸತ್ತಿಹಳ್ಳಿ ಗ್ರಾಮ
  • ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರನ್ನು ಭೇಟಿ ಮಾಡಿ ಮನವಿ
ಚಿಕ್ಕಮಗಳೂರು: ತಾಲೂಕಿನ ಚಿಕ್ಕಹಳ್ಳ ಮತ್ತು ಸತ್ತಿಹಳ್ಳಿ ಗ್ರಾಮಗಳಿಗೆ ರಸ್ತೆ ಸಂಪರ್ಕ ಕ ಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಕುಟುಂಬ ಸಮೇತರಾಗಿ ಗುರುವಾರ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಆಲ್ದೂರು ಹೋಬಳಿಯ ಚಿಕ್ಕಹಳ್ಳ ಮತ್ತು ಸತ್ತಿಹಳ್ಳಿ ಗ್ರಾಮದಲ್ಲಿ ೨೨ ಕುಟುಂಬಗಳಿವೆ. ಗ್ರಾಮಸ್ಥರಿಗೆ ಗ್ರಾಮದಿಂದ ಹೊರತೆರಳಲು ರಸ್ತೆ ಇಲ್ಲದೇ ಹಲವಾರು ವರ್ಷಗಳಿಂದ ಪರದಾಡುವಂತಾಗಿದೆ. ಅಲ್ಲದೇ ಇದೀಗ ಮಳೆಗಾಲ ಆರಂಭವಾಗಿದ್ದು ಶಾಲಾ-ಕಾಲೇಜು ತೆರಳಲು ಮಕ್ಕಳಿಗೆ ಬಹಳಷ್ಟು ಕಷ್ಟ ಸಾಧ್ಯವಾಗಿದೆ ಎಂದರು.
ಪಡಿತರ ಪಡೆಯಲು, ಶಾಲೆಗೆ ತೆರಳಲು ಅಥವಾ ದೈನಂದಿನ ಚಟುವಟಿಕೆಗೆ ತೆರಳಲು ರಸ್ತೆ ಸಂಪರ್ಕ ಇಲ್ಲವಾಗಿದೆ. ಇದನ್ನು ಮನಗಂಡು ತಹಸೀಲ್ದಾರ್, ಉಪವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದ ೧.೧೬ ಎಕರೆ ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡಲು ಶಿಫಾರಸ್ಸು ಮಾಡಿದ್ದಾರೆ ಎಂದು ಹೇಳಿದರು.
ಈ ಸಂಬAಧ ಅರಣ್ಯ ಸಂರಕ್ಷಣಾಧಿಕಾರಿಗೆ ಜಾಗ ಮೀಸಲಿರಿಸಿರುವುದನ್ನು ಪತ್ರಮುಖೇನ ಕಳುಹಿಸಿಕೊಡಲಾಗಿದೆ. ಅಲ್ಲಿಂದ ಸಂಬAಧಿಸಿದ ಕಡತವು ಜಿಲ್ಲಾಡಳಿತ ಕಚೇರಿಗೆ ಬಂದಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಸಂಚರಿಸಲು ರಸ್ತೆ ಜಾಗ ಬಿಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಗ್ರಾಮಸ್ಥರು ತೋಟದ ಕಾಲು ದಾರಿಯಲ್ಲಿ ನಡೆದು ಹೋಗುವಾಗ ಅಪಾಯ ಉಂಟಾಗುವ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ ಹುಲಿ, ಕಾಡಾನೆಗಳ ಹಾವಳಿಯು ಹೆಚ್ಚಿರುವುದು ಅಪಾಯಕ್ಕೆ ಕಾರಣವಾಗಿದೆ. ಇದಕ್ಕೆ ಪರಿಹಾರವೆಂದರೆ ಗ್ರಾಮಕ್ಕೆ ೮೦೦ ಮೀಟರ್ ರಸ್ತೆ ಮಾಡಿಕೊಡುವುದಾಗಿದೆ ಎಂದು ಮನವಿ ಮಾಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಗ್ರಾಮಸ್ಥರಾದ ರಮೇಶ್, ಹೂವೇಗೌಡ, ದೀಕ್ಷಿತ್, ಪ್ರಮೋದ್, ಆಕಾಶ್ ಮೋಹನ್, ಮುರಳಿ, ಸುದನ್ವ, ಚಿಂತನಾ, ಚಿನ್ಮಯಿ, ಗ್ರಂಥವಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net