ಶೃಂಗೇರಿಯಲ್ಲಿ 2023ರಲ್ಲೇ ಗೆಲವು, ಇಂದು ಸಂಭ್ರಮಾಚರಣೆ

ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು  ಸಂಭ್ರಮಾಚರಣೆ ನಡೆಸಿದರು.
ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
Published on
ಎನ್.ಆರ್.ಪುರ: 2023ರ ವಿಧಾನ ಸಭೆ ಚುನಾವಣೆಯಲ್ಲೇ ಜೀವರಾಜ್ ಗೆದ್ದಿದ್ದಾರೆ.ಈಗ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರುಣಕುಮಾರ್ ತಿಳಿಸಿದರು.
ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶೃಂಗೇರಿ ಕ್ಷೇತ್ರದಲ್ಲಿ ಸತ್ಯಕ್ಕೆ ಜಯ ದೊರೆತಿದೆ. ಕಳೆದ ಎಂಟು ವರ್ಷದಿಂದಲೂ ಜೀವರಾಜ್ ಅಧಿಕಾರದಲ್ಲಿ ಇಲ್ಲದಿದ್ದರೂ ಕಾಂಗ್ರೆಸ್ ಮುಖಂಡರು ಜೀವರಾಜ್ ಮತ ಎಣಿಕೆಯಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
2023ರ ಚುನಾವಣೆಯಲ್ಲೇ ಟಿ.ಡಿ.ರಾಜೇಗೌಡ ಸೋತಿದ್ದಾರೆ. ಮೋಸ ಮಾಡಿ ಮೂರು ವರ್ಷ ಅಧಿಕಾರ ನಡೆಸಿ ಸರ್ಕಾರಿ ಸೌಲಭ್ಯ ಉಪಯೋಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಬಿಜೆಪಿ ಹೋರಾಟ ನಡೆಸಲಿದೆ. ರಾಜೇಗೌಡರು ಎಣಿಕೆ ಕಾರ್ಯ ಮುಗಿಯುವ ಮುನ್ನವೇ ವಿಜಯೋತ್ಸವ ಮಾಡಿದ್ದಾರೆ. ಆದರೆ ಬಿಜೆಪಿ ಅಧಿಕೃತವಾಗಿ ಚುನಾವಣಾ ಆಯೋಗ ಪ್ರಮಾಣ ಪತ್ರ ನೀಡಿದ ನಂತರ ವಿಜಯೋತ್ಸವ ನಡೆಸುತ್ತಿದೆ ಎಂದರು.
ಬಿಜೆಪಿ ಮುಖಂಡರಾದ ಬಿ.ಎಸ್.ಆಶೀಶ್‌ಕುಮಾರ್, ಸೈಯದ್‌ಪರ್ವೀಜ್, ಕೆಸವೆ ಮಂಜುನಾಥ್, ರಶ್ಮಿ ದಯಾನಂದ್, ಪ್ರೀತಮ್, ಅಶ್ವನ್, ಎಚ್.ಡಿ.ಲೋಕೇಶ್, ಸುರಭಿ ರಾಜೇಂದ್ರ, ಎನ್.ಎಂ.ಕಾಂತರಾಜ್, ಜಯರಾಂ, ಈಚಿಕೆರೆ ಜಗದೀಶ್, ವೈ.ಎಸ್.ರವಿ, ಮಂಜುನಾಥ್ ಲಾಡ್, ಎಸ್.ಎಸ್.ಸಂತೋಷ ಕುಮಾರ್, ದಿವಾಕರ್, ಡಾ.ಮಹೇಶ್ ಭಂಡಾರಿ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net