ರಸ್ತೆ ಇಕ್ಕೆಲಗಳಲ್ಲಿ ವಾಹನ ನಿಲುಗಡೆಗಾಗಿ ಹಾಕಲಾದ ಸೂಚನಾಫಲಕಗಳು, ಬಸ್‌ನಿಲ್ದಾಣದ ನಿಲುಗಡೆಯ ನಾಮಫಲಕ ಒಂದು ರೀತಿಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದರೆ, ಮತ್ತೊಂದೆಡೆ ಅಂಗಡಿ-ಮುಂಗಟ್ಟುಗಳ ಮುಂದೆ ರಾಜಾರೋಷವಾಗಿ ಕಾರುಗಳನ್ನು ನಿಲ್ಲಿಸುವವರು, ಮತ್ತೆ ಕಾರು ತೆಗೆಯುವುದು ಅವರ ಎಲ್ಲ ಕೆಲಸ ಕಾರ್ಯಗಳು ಮುಗಿದ ಬಹಳಷ್ಟು ಸಮಯದ ನಂತರ. ಇದರಿಂದ ವ್ಯಾಪಾರ ಮಾಡಲು ಅಂಗಡಿಗೆ ಬರುವ ಗ್ರಾಹಕರು ನಿಲುಗಡೆಯಾದ ವಾಹನಗಳನ್ನು ದಾಟಿ ಬರಲು ಕೆಲವೊಮ್ಮೆ ಹರಸಾಹಸಪಡಬೇಕಾದ ಸ್ಥಿತಿ ಕಂಡುಬರುತ್ತಿದೆ.