ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ಮುಖ್ಯ (Bharatanatyam)

ಕಡೂರಿನ ಶಾಸಕರ ಮಾದರಿ ಶಾಲೆಯಲ್ಲಿ ಶ್ರೀ ನಾಟ್ಯಕೇಶವ ನೃತ್ಯ ಕಲಾನಿಕೇತನ ಭರತನಾಟ್ಯ ಶಾಲೆಯಿಂದ ಗುರುಪೂರ್ಣಿಮಾ ಪೂಜಾ ಕಾರ್ಯಕ್ರಮ ನಡೆಸಲಾಯಿತು. ವಿದ್ವಾನ್ ಡಾ. ಎಸ್.ಕೇಶವ್ ಕುಮಾರ್ ಪಿಳೈ, ಟಿ.ಡಿ.ರಾಜನ್ ಮತ್ತಿತರರಿದ್ದರು.
ಕಡೂರಿನ ಶಾಸಕರ ಮಾದರಿ ಶಾಲೆಯಲ್ಲಿ ಶ್ರೀ ನಾಟ್ಯಕೇಶವ ನೃತ್ಯ ಕಲಾನಿಕೇತನ ಭರತನಾಟ್ಯ ಶಾಲೆಯಿಂದ ಗುರುಪೂರ್ಣಿಮಾ ಪೂಜಾ ಕಾರ್ಯಕ್ರಮ ನಡೆಸಲಾಯಿತು. ವಿದ್ವಾನ್ ಡಾ. ಎಸ್.ಕೇಶವ್ ಕುಮಾರ್ ಪಿಳೈ, ಟಿ.ಡಿ.ರಾಜನ್ ಮತ್ತಿತರರಿದ್ದರು.
Published on
 ಕಡೂರು: ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ಮುಖ್ಯ. ಸಂಸ್ಕಾರದ ಶಿಕ್ಷಣ ನೀಡಿದರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯ  ಎಂದು ವಿದ್ವಾನ್ ಡಾ. ಎಸ್.ಕೇಶವ್‌ಕುಮಾರ್ ಪಿಳ್ಳೈ ಹೇಳಿದರು. 
ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿನ ಶಾಸಕರ ಮಾದರಿ ಶಾಲೆಯಲ್ಲಿ ಶನಿವಾರ ಶ್ರೀ ನಾಟ್ಯಕೇಶವ ನೃತ್ಯ ಕಲಾನಿಕೇತನ ಭರತನಾಟ್ಯ ಶಾಲೆಯಿಂದ ಏರ್ಪಡಿಸಿದ್ದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸನಾತನ ಸಂಸ್ಕೃತಿಯ ಭರತನಾಟ್ಯ ಕಲೆಗೆ ತನ್ನದೇಆದ ವೈಶಿಷ್ಟೃವಿದೆ. ಇದರಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಂಡರೆ ಸಂಸ್ಕಾರದ ಗುಣಗಳು ಬೆಳೆಯಲು ಸಾಧ್ಯ ಎಂದರು.
ಮೈಸೂರು ರಾಜರ ಆಸ್ಥಾನದಲ್ಲಿ ನಾಟ್ಯಪ್ರವೀಣೆಯಾಗಿದ್ದ ಡಾ. ಕೆ.ವೆಂಕಟಲಕ್ಷ್ಮಮ್ಮ ಕಡೂರಿನ ತಂಗಲಿ ಗ್ರಾಮದವರು ಎಂಬುದು ಹೆಗ್ಗಳಿಕೆಯ ಸಂಗತಿ. ಕಡೂರಿನಲ್ಲಿ 12 ವರ್ಷಗಳಿಂದಲೂ ಮಕ್ಕಳಿಗೆ ಭರತನಾಟ್ಯ ಕಲೆಯ ತರಬೇತಿ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪಾಲಕರು ಮಕ್ಕಳಿಗೆ ಸನಾತನ ಸಂಸ್ಕೃತಿಯ ಕಲೆಗಳಿಗೆ ಹೆಚ್ಚು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಟಿ.ಡಿ.ರಾಜನ್ ಮಾತನಾಡಿ, ಭರತನಾಟ್ಯ ಇಡೀ ವಿಶ್ವವನ್ನು ಆಕರ್ಷಿಸುತ್ತಿರುವ ನಮ್ಮ ದೇಶದ ಹೆಮ್ಮೆಯ ಕಲೆಯಾಗಿದೆ ಎಂದರು.
 ಕಲಾನಿಕೇತನ ಶಾಲೆ ಮಕ್ಕಳು ಸಾಮೂಹಿಕವಾಗಿ ಗುರುಪೂಜೆ ಸಲ್ಲಿಸಿದರು. ತರಬೇತುದಾರ ವಿದ್ವಾನ್ ಎಸ್.ಸಿ.ಚೇತನ್, ಭೂಮಿಕಾ, ಹಿರಿಯ ಪತ್ರಕರ್ತ ಎಚ್.ಎಸ್.ಪರಮೇಶ್ ಹಾಗೂ ಪಾಲಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net