ಮೂಡಿಗೆರೆ: ಬಿದರಹಳ್ಳಿ ಗ್ರಾಮದಲ್ಲಿರುವ ಸೈಯದ್ ಫಯಾಜ್ ಅಲಿಶಾ ಖಾದ್ರಿ ದರ್ಗಾದಲ್ಲಿ ಏ.28 ರಂದು ಉರೂಸ್ ಕಾರ್ಯಕ್ರಮ ನಡೆಯಲಿದೆ. 27ರಂದು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ದರ್ಗಾ ಸಮಿತಿ ಅಧ್ಯಕ್ಷ ಅಬ್ರಾರ್ ಅಹಮದ್ ತಿಳಿಸಿದರು.
27ರಂದು ರಾತ್ರಿ 8ಕ್ಕೆ ದರ್ಗಾ ಆವರಣದಲ್ಲಿ ಝಿಕ್ರ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. 28ಕ್ಕೆ ಸಂಜೆ 4ಕ್ಕೆ ಸಂದಲ್ ಮೆರವಣಿಗೆ ನಡೆಯಲಿದೆ. ಸಂಜೆ 7ಕ್ಕೆ ದರ್ಗಾಕ್ಕೆ ಚಾದರ ಅರ್ಪಣೆ, ಸಂದಲ್, ದುವಾ, ಸಲಾಂ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9ಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಧಾರ್ಮಿಕ ವಿದ್ವಾಂಸರಾದ ಮುಫ್ತಿ ಮುಹಮ್ಮದ್ ಅಝರ್‌ಉದ್ದೀನ್ ಸಾಹೇಬ್, ಮುಹಮ್ಮದ್ ಮುಖೀಸ್ ರಝಾ, ಮಂಗಳೂರಿನ ಕಾಳಕಟ್ಟೆ ಹಜರತ್‌ಮಹಮ್ಮದ್ ಫಾಝಿಲ್ ರಜ್ವಿ, ಹಾಸನದ ಹಫೀಝ್ ಖಾರಿ ನಾಸೀರ್ ಹುಸೇನ್ ಸೇರಿದಂತೆ ಅನೇಕ ಧಾರ್ಮಿಕ ಪಂಡಿತರು ಭಾಗವಹಿಸಲಿದ್ದಾರೆ.
ಚಿಕ್ಕಮಗಳೂರು, ಮಂಗಳೂರು, ಉಡುಪಿ, ಹಾಸನ, ಶಿವಮೊಗ್ಗ, ಕೊಡಗು, ಮೈಸೂರು, ಬೆಂಗಳೂರು ಸಹಿತ ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ದರ್ಗಾದಲ್ಲಿ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಿದರಹಳ್ಳಿ ಸೈಯದ್ ಫಯಾಜ್ ಅಲಿಶಾ ಖಾದ್ರಿ ದರ್ಗಾದ ಆಡಳಿತ ಸಮಿತಿ ಪದಾಧಿಕಾರಿಗಳಾದ ಮಝರ್ ಆಸಿಫ್, ಅಬ್ದುಲ್ ಸತ್ತಾರ್, ಅಬ್ದುಲ್ ಮಜೀದ್, ಲೀಯಾಕತ್ತಾಲಿ ಇದ್ದರು.