ಬುಧವಾರ ಶ್ರೀ ವಿಶ್ವಕರ್ಮ ಸಂಘದಿಂದ ಆಯೋಜಿಸಿದ್ದ ಉಪಾಕರ್ಮ ಧಾರ್ಮಿಕ ಆಚರಣೆಯಲ್ಲಿ ಮಾತನಾಡಿ, ಶ್ರಾವಣ ಮಾಸದಲ್ಲಿ ಬರುವ ಉಪಾಕರ್ಮ ಯಜ್ಞೋಪವೀತ ಧರಿಸಿದವರಿಗೆ ಅತಿ ಮುಖ್ಯವಾಗಿದೆ. ಅದು ಶಾಸೀಯ ಕಟ್ಟುಪಾಡಿನಲ್ಲಿ ನಡೆಯುವ ವಾರ್ಷಿಕವಿಯಾಗಿದೆ. ಹಲವು ಕಡೆ ಉಪಾಕರ್ಮ ದಿನ ಪುಣ್ಯಾಹ, ನಾಂದಿ ಹೋಮ, ಗುರುಕಾಣಿಕೆ ನೀಡುವ ಪದ್ಧತಿ ಇದೆ. ಹಿಂದಿನ ಕಾಲದಲ್ಲಿ ವೇದಶಾಸ ಪಾರಂಗತರ ಮನೆಯಲ್ಲಿ ಹತ್ತಾರು ಜನ ಸೇರಿ ಸಾಮೂಹಿಕ ಯಾಗ ಕಾರ್ಯದಲ್ಲಿ ಭಾಗವಹಿಸಿ ಜನಿವಾರ ಧರಿಸುವ ಪದ್ಧತಿ ಇತ್ತು ಎಂದರು.