

ಪ್ರಮುಖ ಮುಖ್ಯಾಂಶಗಳು
ಕಳಸ: ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಹಾಗೂ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಎಲ್ಲ ಚಾರಣ ಪಥಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಜ.14ರಿಂದ ಜಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಚಾರಣ ಪಥಗಳು ಚಾರಣಿಗರಿಗೆ ಲಭ್ಯವಿರುವುದಿಲ್ಲ ಎಂದು ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ಬೇಸಿಗೆ ಆರಂಭವಾಗುತ್ತಿರುವುದರಿಂದ ಕಾಡಿನಲ್ಲಿ ಒಣಗಿದ ಎಲೆಗಳು ಹೆಚ್ಚಾಗಿರುತ್ತವೆ. ಚಾರಣಿಗರಿಂದ ಅಚಾತುರ್ಯದಿಂದ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆ ಇರುವುದರಿಂದ ನಿಷೇಧ ಕ್ರಮ ಕೈಗೊಳ್ಳಲಾಗಿದೆ. ಗಂಗಡಿಕಲ್ ಚಾರಣ, ಕುದುರೆಮುಖ ಚಾರಣ, ಕುರಿಂಜಾಲು ಚಾರಣ, ವಾಲಿಕುಂಜ ಚಾರಣ(ಎಸ್.ಕೆ.ಬಾರ್ಡರ್ ಹಾಗೂ ಕೆರ್ವಾಶೆ ಎರಡೂ ಕಡೆಯಿಂದ), ನರಸಿಂಹಪರ್ವತ (ಕಿಗ್ಗ ಹಾಗೂ ಮಲೆಂದೂರು), ಕೊಡಚಾದ್ರಿ (ವಳೂರು ಹಾಗೂ ಹಿಡುವ ಮನೆ), ಬಂಡಾಜೆ-ಫಾಲ್ಸ್ (ವೇಣೂರು), ನೇತ್ರಾವತಿ ಚಾರಣ ನಿಷೇಧಸಲಾಗಿದೆ.