ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಪ್ರವಾಸಿಗರ ವಾಹನ ತಪಾಸಣೆ, ನಿಯಂತ್ರಣ ಮಾಡುವ ಉದ್ದೇಶದಿಂದ ಎನ್ಎಂಡಿಸಿ ಬಳಿ ಪ್ರವಾಸೋದ್ಯಮ ಇಲಾಖೆಯಿಂದ ಚೆಕ್ಪೋಸ್ಟ್ ತೆರೆಯಲಾಗಿದೆ. ಇದಲ್ಲದೆ ಕವಿಕಲ್ ಗಂಡಿ ಬಳಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಸಹ ಇದೆ. ಆದರೆ ಇಲ್ಲಿಗೆ ನೀರಿನ ಸೌಕರ್ಯವೇ ಇಲ್ಲದಿರುವುದರಿಂದಾಗಿ ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಪರದಾಡುವಂತಾಗಿದೆ.