ಕುದುರೆಮುಖದಲ್ಲಿ ಕಳವು ಮಾಡಿದವರ ಬಂಧನ

ಕುದುರೆಮುಖದಲ್ಲಿ ಗುಜರಿ ಸಾಮಾನುಗಳನ್ನು ಕದ್ದು ಸಾಗಿಸುತ್ತಿರುವುವುದು.
ಕುದುರೆಮುಖದಲ್ಲಿ ಗುಜರಿ ಸಾಮಾನುಗಳನ್ನು ಕದ್ದು ಸಾಗಿಸುತ್ತಿರುವುವುದು.
Published on
ಕಳಸ: ಸಂಸೆ ಗ್ರಾಮದ ಹೊಸಮಕ್ಕಿ ಸಮೀಪದ ಕೆಐಒಸಿಎಲ್ ಕಂಪನಿಗೆ ಸೇರಿದ ನಿಷೇಧಿತ ಪ್ರದೇಶದಲ್ಲಿ ಕೇಬಲ್ ಹಾಗೂ ಎಲೆಕ್ಟ್ರಿಕಲ್ ಉಪಕರಣಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೃತ್ಯಕ್ಕೆ ಬಳಸಿದ ವಾಹನ ಸಮೇತ ಹಿಡಿದು ಕುದುರೆಮುಖ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.
ವಿನೋಬನಗರದ ರವಿ, ಅಯ್ಯಪ್ಪ, ಜಾರ್ಜ್ ಕುಟ್ಟಿ ಬಂಧಿತರು. ಜು.20 ರಂದು ಬೆಳಗ್ಗೆ ಸುಮಾರು 8 ಗಂಟೆಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಕಂಪನಿ ಜಾಗದಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಿದ್ದ ವಾಹನವನ್ನು ಗಮನಿಸಿದ ಸೆಕ್ಯೂರಿಟಿ ಸೂಪರ್‌ವೈಸರ್ ವಾಹನವನ್ನು ಹಿಂಬಾಲಿಸಿಕೊಂಡು ಹೋಗಿ ಪರಿಶೀಲಿಸಿದಾಗ ಕಂಪನಿಗೆ ಸೇರಿದ ಕೇಬಲ್‌ಗಳು, ಪೈಪ್‌ಗಳು ಹಾಗೂ ವಿವಿಧ ಎಲೆಕ್ಟ್ರಿಕಲ್ ಸಾಮಗ್ರಿಗಳು ಪತ್ತೆಯಾಗಿವೆ. ತಕ್ಷಣ ಕಂಪನಿ ಅಧಿಕಾರಿ ಶ್ರೇಯಸ್ ಹಾಗೂ ಡಿಜಿಎಂ ಕಾರ್ಯಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ವಾಹನದಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆರೋಪಿಗಳು ಈ ಹಿಂದೆ ಕುದುರೆಮುಖ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಳೆಗಾಲದಲ್ಲಿ ಕೆಲಸ ಇಲ್ಲದಿರುವುದರಿಂದ ಹಣಕ್ಕಾಗಿ ಕಂಪನಿ ಪ್ರದೇಶದಲ್ಲಿದ್ದ ಗುಜರಿ ವಸ್ತುಗಳನ್ನು ಕದ್ದು ಮಾರಾಟ ಮಾಡಲು ಕಳವು ಮಾಡಲಾಗಿದೆ ಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಕಳವು ಮಾಡಿದ ಸಾಮಗ್ರಿ ಮತ್ತು ಬಳಕೆ ಮಾಡಿ ವಾಹನವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಕುದುರೆಮುಖ ಪಿಎಸೈ ಲೋಕೇಶ್, ಸಿಬ್ಬಂದಿ ರಾಜೇಶ್, ಅನಿಲ್, ಮಂಗಳದಾಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net