ಇದರಿಂದ ಅನುಮಾನ ಗೊಂಡ ಮಂಜುನಾಥ್ ಅವರು ಮನೆಯನ್ನು ಪರಿಶೀಲಿಸಿದಾಗ ಮೊದಲ ಮಹಡಿಯ ಕೊಠಡಿಯ ಲಾಕರ್ ನಲ್ಲಿಟ್ಟಿದ್ದ ಚಿನ್ನದ ಸರ, ಬಳೆಗಳು, ಬ್ರಾಸ್ ಲೇಟ್ ಸೇರಿದಂತೆ 12.60ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಒಂದು ಸಾವಿರ ರೂ. ನಗದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮಂಜುನಾಥ್ ಈ ಸಂಬಂಧ ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.