ಪೊಲೀಸ್ ವಸತಿ ಗೃಹದಲ್ಲಿ ಕಳ್ಳತನ

ಕ್ರೈಂ
ಕ್ರೈಂ
Published on

ಪ್ರಮುಖ ಮುಖ್ಯಾಂಶಗಳು

  • 8 ಲಕ್ಷ ರೂ. ಮೌಲ್ಯದ 48 ಗ್ರಾಂ ಚಿನ್ನಾಭರಣ ಕಳ್ಳತನ
ಚಿಕ್ಕಮಗಳೂರು: ಪೋಲಿಸ್ ವಸತಿ ಗೃಹದಲ್ಲಿ ವಾಸವಿರುವ ಬಿಂದು ಎನ್ನುವರ ಮನೆಯ ಬೀಗ ತೆಗೆದು ಒಳ ಪ್ರವೇಶಿಸಿರುವ ಕಳ್ಳರು ಸುಮಾರು 8 ಲಕ್ಷ ರೂ. ಮೌಲ್ಯದ 48 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.
ಬಿಂದು ಅವರು ಸ್ನೇಹಿತರೊಂದಿಗೆ ಮಲ್ಲೇನಹಳ್ಳಿಯ ದೇವೀರಮ್ಮ ದೇವಾಲಯಕ್ಕೆ ತೆರಳಿದ್ದರು. ಕರ್ತವ್ಯಕ್ಕೆ ತೆರಳಿದ ಪತಿ ಬರುತ್ತಾರೆ ಎಂಬ ಕಾರಣದಿಂದಾಗಿ ಮನೆಯ ಬೀಗವನ್ನು ಶೂ ಒಳಗೆ ಇಟ್ಟಿದ್ದರು.
ಮಧ್ಯಾಹ್ನದ ವೇಳೆಗೆ ಮನೆಗೆ ಬಂದಾಗ ಮನೆಯ ಬೀಗ ತೆಗೆದಿರುವುದು ಬೆಳಕಿಗೆ ಬಂದಿದೆ. ಆಗ ಮನೆಯನ್ನು ಪರಿಶೀಲನೆ ನಡೆಸಿದಾಗ ಒಂದು ಚಿನ್ನದ ಸರ ಹಾಗೂ ಬ್ರಾಸ್ ಲೇಟ್ ಕಳ್ಳತನವಾಗಿರುವುದು ತಿಳಿದಿದೆ. ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net