ಶೃಂಗೇರಿ: ತಾಲೂಕಿನಾದ್ಯಂತ ಮಳೆ ಚುರುಕುಗೊಂಡಿದ್ದು, ಶುಕ್ರವಾರ ದಿನವಿಡೀ ಮಳೆಯಾಗಿದೆ. ಆಗಾಗ ಬಿರುಸಿನ ಮಳೆಯಾಗುತ್ತಿದ್ದು, ಸಾಮಾನ್ಯ ಜನಜೀವನಕ್ಕೆ ತೊಂದರೆಯಾಗಿತ್ತು. ಮುಂಗಾರು ಮಳೆ ವಿಲ ಎಂಬ ಹವಾಮಾನ ಇಲಾಖೆ ಮನ್ಸೂಚನೆಗೆ ವಿರುದ್ಧವಾಗಿ ಭರ್ಜರಿ ಮಳೆಯಾಗುತ್ತಿದೆ. 24 ಗಂಟೆಯಲ್ಲಿ ಕಿಗ್ಗಾ 74.5 ಮಿ.ಮೀ, ಶೃಂಗೇರಿ 63.4, ಬೇಗಾರ್ 62, ವಿದ್ಯಾರಣ್ಯಪುರ 52.5, ನೆಮ್ಮಾರ್ 45 ಮಿ.ಮೀ ಮಳೆ ದಾಖಲಾಗಿದೆ.