ಮೊಬೈಲ್ ಕದ್ದು ಬ್ಯಾಂಕ್ ಖಾತೆ ಖಾಲಿ ಮಾಡಿದ ಖದೀಮರು

ಕ್ರೈಂ
ಕ್ರೈಂ
Published on

ಪ್ರಮುಖ ಮುಖ್ಯಾಂಶಗಳು

  • ಕಡೂರು ಬಸ್ ನಿಲ್ದಾಣದಲ್ಲಿ ಮೆಸ್ಕಾಂ ನೌಕರರೋರ್ವರ ಮೊಬೈಲ್ ಕಳ್ಳತನ
  • ಮೊಬೈಲ್ ಬಳಸಿಕೊಂಡು ಖಾತೆಯಲ್ಲಿದ್ದ ಹಣವನ್ನು ಖಾಲಿ
ಚಿಕ್ಕಮಗಳೂರು: ಕಡೂರು ಬಸ್ ನಿಲ್ದಾಣದಲ್ಲಿ ಮೆಸ್ಕಾಂ ನೌಕರರೋರ್ವ ಮೊಬೈಲ್ ಕಳ್ಳತನ ಮಾಡಿದ ಖದೀಮರು ಆ ಮೊಬೈಲ್ ಬಳಸಿಕೊಂಡು ಖಾತೆಯಲ್ಲಿದ್ದ ಹಣವನ್ನು ಖಾಲಿ ಮಾಡಿರುವ ಘಟನೆ ನಡೆದಿದೆ.
ಆಲ್ದೂರು ಮೂಲದ ಮೆಸ್ಕಾಂ ನೌಕರ ಪ್ರದೀಪ್ ಎಂಬುವರು ಕಡೂರು ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಅವರ ಮೊಬೈಲ್ ಕಳ್ಳತನವಾಗಿತ್ತು. ಕೂಡಲೇ ಆಲ್ದೂರಿಗೆ ಆಗಮಿಸಿದ ಅವರು ಪೊಲೀಸರ ಮಾರ್ಗದರ್ಶನದಂತೆ ಲಾಸ್ಟ್ ರಿಪೋರ್ಟ್ ಎಂಬ ಪೋರ್ಟಲ್ ನಲ್ಲಿ ಮೊಬೈಲ್ ನ ಎಲ್ಲಾ ದಾಖಲೆಯ ವರದಿಯನ್ನು ಸಲ್ಲಿಕೆ ಮಾಡಿ ಮೊಬೈಲ್ ಬ್ಲಾಕ್ ಮಾಡಿಸಿದ್ದರು.
ಬಳಿಕ ಕಳೆದುಹೋದ ಸಿಮ್ ಕಾರ್ಡ್ ಬದಲಾಗಿ ಹೊಸ ಸಿಮ್ ಕಾರ್ಡ್ ಖರೀದಿಸಿ ಅಂದೆ ಸಿಮ್ ಆಕ್ಟಿವೇಶನ್ ಮಾಡಿಸಿಕೊಂಡಿದ್ದರು. ಬಳಿಕ ಹೊಸತಾಗಿ ಮತ್ತೊಂದು ಮೊಬೈಲನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಲು ಹೋದಾಗ ತಮ್ಮ ಖಾತೆಯಲ್ಲಿ ಹಣ ಇಲ್ಲದಿರುವುದು ಅರಿವಿಗೆ ಬಂದಿದೆ.
ಕೂಡಲೇ ಬ್ಯಾಂಕ್ ನಲ್ಲಿ ತಮ್ಮ ಖಾತೆ ಬಗ್ಗೆ ವಿಚಾರ ಮಾಡಿದಾಗ1,03,923 ರೂ. ಇದ್ದ ಬ್ಯಾಲೆನ್ಸ್ ಮೊಬೈಲ್ ಕಳೆದು ಹೋದ ಬಳಿಕ 9,873 ರೂ. ಆಗಿರುವುದು ತಿಳಿದು ಬಂದಿದೆ. ಕೂಡಲೇ ಬ್ಯಾಂಕ್ ನ ಎಲ್ಲಾ ಸೇವೆಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿಸಿ ಆಲ್ದೂರು ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ತಮ್ಮ ಖಾತೆಯಿಂದ ಅಕ್ರಮವಾಗಿ 94,050 ರೂ. ವರ್ಗಾವಣೆ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ತಮ್ಮ ಹಣ ವಾಪಸ್ ಕೊಡಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಪ್ರಕರಣ ಚಿಕ್ಕಮಗಳೂರು ಸಿಇಎನ್ ಠಾಣೆಗೆ ವರ್ಗಾವಣೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net