ಕಡೂರನ್ನು ಬರಪಟ್ಟಿಗೆ ಸೇರಿಸಲು ಹೋರಾಟ ನಿರಂತರ

ಕಡೂರನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿ ಶಾಸಕ ವೈಎಸ್‌ವಿ ದತ್ತ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾಗೆ ಮನವಿ ಸಲ್ಲಿಸಿದರು. ಪ್ರೇಮ್‌ಕುಮಾರ್, ಕೋಡಿಹಳ್ಳಿ ಮಹೇಶ್ವರಪ್ಪ, ಬಿ.ಟಿ.ಗಂಗಾಧರನಾಯ್ಕ,  ಾಲಾಕ್ಷಪ್ಪ, ಕಡೂರು ಹರ್ಷ ಇದ್ದರು.
ಕಡೂರನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿ ಶಾಸಕ ವೈಎಸ್‌ವಿ ದತ್ತ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾಗೆ ಮನವಿ ಸಲ್ಲಿಸಿದರು. ಪ್ರೇಮ್‌ಕುಮಾರ್, ಕೋಡಿಹಳ್ಳಿ ಮಹೇಶ್ವರಪ್ಪ, ಬಿ.ಟಿ.ಗಂಗಾಧರನಾಯ್ಕ, ಾಲಾಕ್ಷಪ್ಪ, ಕಡೂರು ಹರ್ಷ ಇದ್ದರು.
Published on
ಕಡೂರು: ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಒತ್ತಾಯಿಸಿ ಕಳೆದ ಎರಡು ದಿನದಿಂದ ಕಲ್ಕರೆಯಿಂದ ಕಡೂರುವರೆಗೆ ರೈತರೊಂದಿಗೆ ಮಾಜಿ ಶಾಸಕ ವೈಎಸ್‌ವಿ ದತ್ತ ನಡೆಸಿದ ಪಾದಯಾತ್ರೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾಗೆ ಮನವಿ ಸಲ್ಲಿಸುವ ಮೂಲಕ ಸಂಪನ್ನವಾಯಿತು.
ಪಾದಯಾತ್ರೆ ಬಿಳುವಾಲಕ್ಕೆ ಆಗಮಿಸಿದಾಗ ಗ್ರಾಮಸ್ಥರು, ರೈತರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಬಿಳುವಾಲದಲ್ಲಿ ವಾಸ್ತವ್ಯ ಹೂಡಿದ ದತ್ತ ಶನಿವಾರ ಎಂ.ಕೋಡಿಹಳ್ಳಿಗೆ ಆಗಮಿಸಿದಾಗ ಮಹಿಳೆಯರು ಆರತಿಎತ್ತಿ ಸ್ವಾಗತಿಸಿದರು. ರೈತರು ದತ್ತ ಅವರ ಬಳಿ ಅಳಲುತೋಡಿಕೊಂಡರು.
ಮಾಜಿ ಶಾಸಕ ವೈಎಸ್‌ವಿ ದತ್ತ ಮಾತನಾಡಿ, ನಾನು ಶಾಸಕನಾದ ಸಂದರ್ಭದಲ್ಲಿ ವಿರೋಧ ಪಕ್ಷದ ಶಾಸಕನಾಗಿದ್ದರೂ ಸಹ ಸಮರ್ಪಕವಾಗಿ ಬರ ನಿರ್ವಹಣೆ ಮಾಡಿದ ಆತ್ಮತೃಪ್ತಿಯಿದೆ. ಎಲ್ಲಿಯೂ ತೊಂದರೆಯಾಗದಂತೆ ನೂರಾರು ಕೊಳವೆಬಾವಿಗಳನ್ನು ಕೊರೆಸಲು ವ್ಯವಸ್ಥೆ, ಗೋ ಶಾಲೆಗಗಳನ್ನು ಆರಂಭಿಸಲಾಗಿತ್ತು. ಈ ಹಿಂದೆ ಕಡೂರನ್ನು ಬರ ಪಟ್ಟಿಯಿಂದ ಕೈಬಿಟ್ಟಾಗಲೂ ನಾನು ಜಿಲ್ಲಾ ಕೇಂದ್ರಕ್ಕೆ ಪಾದಯಾತ್ರೆ ಮಾಡಿದ್ದು ಜನಮಾನಸದಲ್ಲಿ ಇಂದಿಗೂ ಉಳಿದಿದೆ. ಆದರೆ ಬರಪಟ್ಟಿ ಸೇರ್ಪಡೆಗೆ ಪ್ರತಿ ಬಾರಿಯೂ ಹೋರಾಟ ಮಾಡಿ ಪಡೆಯಬೇಕಾದ ಸ್ಥಿತಿ ಎದುರಾಗಿರುವುದು ನಮ್ಮ ದೌರ್ಭಾಗ್ಯ ಎಂದರು.
ಈಗಲೂ ಬರಪೀಡಿತ ಕಡೂರಿನ ಹಳ್ಳಿಗಳನ್ನು ತಿರುಗಿ ವಾಸ್ತವ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರೊಂದಿಗೆ ಸಮೀಕ್ಷೆ ಮಾಡಿ ಬರಪೀಡಿತ ಎಂದು ಘೋಷಿಸಲು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಸರ್ಕಾರ ಅದಕ್ಕೆ ಮನ್ನಣೆ ನೀಡಿಲ್ಲ. ಮಲೆನಾಡಿನ ತಾಲೂಕುಗಳನ್ನು ಬರ ಎಂದು ಗುರುತಿಸುವ ಸರ್ಕಾರಕ್ಕೆ ಅಪ್ಪಟ ಬರದ ಛಾಯೆ ಎದುರಿಸುತ್ತಿರುವ ಕಡೂರು ತಾಲೂಕು ಕಣ್ಣಿಗೆ ಕಾಣಲಿಲ್ಲವೇ? ಅಥವಾ ನಮ್ಮ ತಾಲೂಕನ್ನು ಜಿಲ್ಲೆಯಿಂದ ಕೈಬಿಟ್ಟಿದ್ದಾರೆಯೇ?. ಇಷ್ಟು ಹೋರಾಟ ಮಾಡಿದರೂ ಸರ್ಕಾರ ಬರ ಪೀಡಿತ ತಾಲೂಕಾಗಿ ಘೋಷಣೆ ಮಾಡದಿರುವುದು ರೈತರಿಗೆ ಮಾಡಿದ ಅನ್ಯಾಯ ಎಂದು ವಾಗ್ದಾಳಿ ನಡೆಸಿದರು.
ಕೆಎಂಎ್ ನಿರ್ದೇಶಕ ಬಿದರೆ ಜಗದೀಶ್ ಮಾತನಾಡಿ, ಕಡೂರು ಯಾವಾಗಲೂ ನಿರ್ಲಕ್ಷೃಕ್ಕೆ ಒಳಗಾಗುತ್ತದೆ. ಎಲ್ಲವನ್ನೂ ಹೋರಾಟದ ಮೂಲಕ ಪಡೆಯುವ ಸ್ಥಿತಿ ನಮ್ಮದಾಗಿದೆ. ಸರ್ಕಾರ ಕಣ್ತೆರೆಯಬೇಕು. ಕೂಡಲೇ ಕಡೂರನ್ನು ಬರಪೀಡಿತ ಎಂದು ಕೂಡಲೇ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಿ.ಎಚ್. ಪ್ರೇಮ್‌ಕುಮಾರ್, ಮುಖಂಡರಾದ ಕೋಡಿಹಳ್ಳಿ ಮಹೇಶ್ವರಪ್ಪ, ಬಿ.ಟಿ.ಗಂಗಾಧರನಾಯ್ಕ, ಾಲಾಕ್ಷಪ್ಪ, ಕಡೂರು ಹರ್ಷ, ಮೋಹನ, ಗಣೇಶ್,ಡಿ.ಪ್ರಶಾಂತ್,ಮಚ್ಚೇರಿ ಮಂಜು, ಕಲ್ಕೆರೆ ಯತೀಶ್, ಕಳ್ಳಿಹೊಸಹಳ್ಳಿ ಹರೀಶ್, ರೈತ ಸಂಘದ ಚಿದಾನಂದಮೂರ್ತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net