ನಗರದ ಜಿಪಂ ಮಿನಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಪ್ರಾಧಿಕಾರದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ೧,೮೭೭ ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಮತ್ತು ಕೆಲವು ಇಲಾಖಾಧಿಕಾರಿಗಳನ್ನು ಪರಿವೀಕ್ಷಕರನ್ನಾಗಿ ನೇಮಿಸಲಾಗಿದೆ. ಅವರೊಂದಿಗೆ ಜಿಲ್ಲೆಯ ಎರಡು ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ, ವಾರ್ಡ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರು ಸೇರಿ ಪರಿಷ್ಕರಣೆ ಆರಂಭಿಸಲಿದ್ದಾರೆ. ಪರಿಷ್ಕರಣೆಗೆ ಬರುವ ಮುನ್ನವೇ ಫಲಾನುಭವಿಗಳು ಸಲ್ಲಿಸಬೇಕಾದ ದಾಖಲಾತಿ ಮತ್ತಿತರ ವಿಷಯಗಳನ್ನು ತಿಳಿಸಲಾಗುವುದು. ಜಿಲ್ಲೆಯ ೨.೬೨ ಲಕ್ಷ ಯಜಮಾನಿಯರ ಮನೆ ಮನೆಗೆ ತೆರಳಿ ಪರಿಷ್ಕರಣೆ ನಡೆಸಲಾಗುವುದು ಎಂದರು.