ಅಭಿವೃದ್ಧಿಗೆ ಕೊಡುತ್ತಿರುವ ಹಣ ಸದುಪಯೋಗವಾಗಬೇಕು

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಖರಾಯಪಟ್ಟಣ, ಜೋಡಿ ಹೋಚಿಹಳ್ಳಿ, ನಾಗರಾಳು, ಚಿಕ್ಕದೇವನೂರು, ಈ ನಾಲ್ಕು ಗ್ರಾಮಗಳಲ್ಲಿ ೧.೧೦ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳಿಗೆ ಶಾಸಕ ಎಚ್‌.ಡಿ.ತಮ್ಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಖರಾಯಪಟ್ಟಣ, ಜೋಡಿ ಹೋಚಿಹಳ್ಳಿ, ನಾಗರಾಳು, ಚಿಕ್ಕದೇವನೂರು, ಈ ನಾಲ್ಕು ಗ್ರಾಮಗಳಲ್ಲಿ ೧.೧೦ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳಿಗೆ ಶಾಸಕ ಎಚ್‌.ಡಿ.ತಮ್ಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.
Published on
ಚಿಕ್ಕಮಗಳೂರು: ನಮ್ಮ ಸರ್ಕಾರ ಬಡವರ ಪರವಾಗಿದೆ, ಬಡವರ ಬದುಕಿಗೆ ಕೊಟ್ಟಷ್ಟೇ ಹಣವನ್ನು ಅಭಿವೃದ್ಧಿಗೆ ನೀಡುತ್ತಿದೆ. ಈ ಹಣದ ಸದುಪಯೋಗ ಆಗಬೇಕು. ಕಾಮಗಾರಿ ಮಾಡುವ ಗುತ್ತಿಗೆದಾರರು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳದಲ್ಲಿ ಖುದ್ದಾಗಿ ಹಾಜರಾಗಿ ಪರಿಶೀಲನೆ ನಡೆಸಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಹೇಳಿದರು.
ಸಖರಾಯಪಟ್ಟಣ, ಜೋಡಿ ಹೋಚಿಹಳ್ಳಿ, ನಾಗರಾಳು, ಚಿಕ್ಕದೇವನೂರು, ಈ ನಾಲ್ಕು ಗ್ರಾಮಗಳಲ್ಲಿ ೧.೧೦ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೫೦ ಕೋಟಿ ರೂಪಾಯಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದರು. ಈ ಅನುದಾನದಲ್ಲಿ ಗ್ರಾಮೀಣ ಭಾಗದ ರಸ್ತೆಗಳಿಗೆ ೧೦ ಕೋಟಿ ನೀಡಲಾಗಿದೆ. ಇಂದು ೧.೧೦ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.
ಜನರ ಬದುಕಿಗಾಗಿ ಐದು ಗ್ಯಾರಂಟಿಯನ್ನು ಕೊಟ್ಟಿದ್ದೇವೆ. ಪ್ರತಿ ಕುಟುಂಬದ ಯಜಮಾನಿಗೆ ಗೃಹ ಲಕ್ಷಿ÷್ಮ ಯೋಜನೆಯಡಿ ೨೦೦೦ ರು. ಅನ್ನಭಾಗ್ಯದಡಿ ೧೦ ಕೆಜಿ ಅಕ್ಕಿ, ಶಕ್ತಿ ಯೋಜನೆ, ಯುವ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಕ್ಷೇತ್ರದ ಎಲ್ಲಾ ಹಿಂದೂ ಸಮಾಜದ ಸಮುದಾಯ ಭವನಗಳು ಮತ್ತು ದೇವಾಲಯಗಳಿಗೆ ೭ ಕೋಟಿ ಅನುದಾನವನ್ನು ನೀಡಲಾಗಿದೆ. ಅದೇ ರೀತಿ ಅಲ್ಪಸಂಖ್ಯಾತರ ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರ ಖಬರ್ ಸ್ಥಾನ್ ಮತ್ತು ಮಸೀದಿಗಳಿಗೂ ಸಹ ಸುಮಾರು ೨ ಕೋಟಿ ಅನುದಾನವನ್ನು ಕೊಡುವಂತ ಕೆಲಸವನ್ನು ಸರ್ವಧರ್ಮವನ್ನು ಪ್ರೀತಿಸುವಂತಹ ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಅವರು ಮಾಡಿದ್ದಾರೆ ಎಂದು ಹೇಳಿದರು.
ಇಡೀ ದೇಶದಲ್ಲಿ ಬಸವಣ್ಣನವರ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ೮ ವರ್ಷ ಮುಖ್ಯಮಂತ್ರಿ ಆಗಿದ್ದ ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದಂತೆ ೫ ಭಾಗ್ಯಗಳು ಕೊಟ್ಟಿದ್ದಾರೆ. ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರ ಹಿಂದೆ ಬಿದ್ದಿಲ್ಲ. ಆಡಳಿತ ಯಂತ್ರವನ್ನು ಚುರುಕುಗೊಳಿಸಿದ್ದೇವೆ ಎಂದರು.
ಕೃಷಿಯನ್ನು ನಂಬಿ ಬದುಕುತ್ತಿರುವ ದೇಶ ನಮ್ಮದು, ಈವರೆಗೆ ಸರಿಯಾಗಿ ಮಳೆ ಬಂದಿಲ್ಲ, ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಬೇಕು, ನಾವೆಲ್ಲಾ ಮಾಡುತ್ತಿರುವುದು ಮಾನವ ಪ್ರಯತ್ನ. ನಮ್ಮ ರೈತರು ಕೆರೆ ತುಂಬಿಸಲು ಹೇಳಿದ್ದರು ಬೆಳವಾಡಿ, ಮಾಚೇನಹಳ್ಳಿ, ಕುರುಬರಹಳ್ಳಿ ಕೆರೆಗಳು ಮಳೆ ಬಂದಾಗ ಮಾತ್ರ ಈ ಹಿಂದೆ ತುಂಬಿವೆ. ಎತ್ತಿನಹೊಳೆಯ ನೀರನ್ನು ಪೈಪ್ ಗಳ ಮೂಲಕ ಲಿಫ್ಟ್ ಮಾಡಿ ಹಳೇಬೀಡು ಕೆರೆ ತುಂಬಿಸಲಾಗಿದೆ. ಸದ್ಯದಲ್ಲೇ ಬೆಳವಾಡಿಕೆರೆಗೂ ಬಿಡಬೇಕೆಂದು ಮುಖ್ಯಮಂತ್ರಿಯಿAದ ನೀರಾವರಿ ಇಲಾಖೆಗೆ ಸೂಚನೆಯನ್ನು ಕೊಡಿಸಲಾಗಿದೆ ಎಂದು ಹೇಳಿದರು.
ಇಲ್ಲಿನ ಬಸವೇಶ್ವರಸ್ವಾಮಿ ದೇವಸ್ಥಾನ, ಯಲ್ಲಮ್ಮ ದೇವಸ್ಥಾನ, ರಂಗನಾಥ ಸ್ವಾಮಿ ದೇವಾಲಯದ ಯಾತ್ರಿ ನಿವಾಸಕ್ಕೆ ಅನುದಾನ ಕೊಡಲಾಗಿದೆ. ದೇವಾಲಯ, ಸಮುದಾಯ ಭವನಗಳಿಗೂ ಹಣ ನೀಡಲಾಗಿದೆ. ರಸ್ತೆಗೂ ಕೊಡಲಾಗಿದೆ. ಮಸೀದಿಗೆ ೨೦ ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ. ಹಳೆ ಹಟ್ಟಿ ದೇವಸ್ಥಾನಕ್ಕೆ ೧೦ ಲಕ್ಷ ನೀಡುವ ಮೂಲಕ ಅಭಿವೃದ್ಧಿ, ಜನರ ಬದುಕು ಮತ್ತು ದೇವರ ಮೇಲಿರುವ ಭಕ್ತಿಯಿಂದಾಗಿ ಹೆಚ್ಚು ಅನುದಾನ ನೀಡಲಾಗಿದೆ ಎಂದರು.
ಚುನಾವಣೆ ನಡೆಯುವಾಗ ನಾನು ಒಂದು ಪಕ್ಷದ ಅಭ್ಯರ್ಥಿ, ಗೆದ್ದ ಮೇಲೆ ಈ ಕ್ಷೇತ್ರದ ಶಾಸಕ. ಯಾವತ್ತು ಜಾತಿ ಮಾಡದೇ, ಪಕ್ಷ ಬೇಧ ಮಾಡದೇ, ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡಿದ್ದೇನೆ. ನಮಗೆ ಸಿಕ್ಕಿರುವ ಈ ಒಂದು ಅವಕಾಶ. ನಿಮ್ಮೆಲ್ಲರ ಸಹಕಾರದಿಂದ ಉತ್ತಮ ಕೆಲಸ ಮಾಡಿದ್ದೇನೆ. ಇನ್ನು ಕೆಲವು ಕೆಲಸಗಳು ಬಾಕಿ ಇವೆ. ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದು ಹೇಳಿದರು.
ನೀವು ಕೆಲಸ ಮಾಡುವ ಶಕ್ತಿ ನೀಡಿದ್ದೀರಾ, ಎಲ್ಲೂ ಕೂಡ ನಾನು ಮಾಡಿದ್ದು ಎಂದು ಹೇಳುವುದಿಲ್ಲಾ, ನಾವು ಮಾಡಿದ್ದು. ಕೆಲವರು ಮೊಸಳೆ ಕಣ್ಣಿನಿಂದ ಹೇಳುತ್ತಿದ್ದರು. ಇಲ್ಲಿನ ಹೆಣ್ಣು ಮಕ್ಕಳು ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರುವುದನ್ನು ನೋಡಿದರೆ ಬೇಜರಾಗುತ್ತದೆ ಎನ್ನುತ್ತಿದ್ದರು. ಯಾರೂ ಕೂಡ ಜವಳಿ ಪಾರ್ಕ್ ಮಂಜೂರು ಮಾಡಿಸಲಿಲ್ಲ. ಆದರೆ, ನಮ್ಮ ನಿಕಟಪೂರ್ವ ಸಿಎಂ ಸಿದ್ಧರಾಮಯ್ಯ ಅವರು, ನಮ್ಮ ಜಿಲ್ಲೆಗೆ ೨ ಜವಳಿ ಪಾರ್ಕ್ ಕೊಟ್ಟಿದ್ದಾರೆ ಎಂದ ಶಾಸಕರು, ೧೦ ವರ್ಷದ ಹಿಂದೆ ಈ ಪ್ರಯತ್ನ ಮಾಡಿದ್ದರೆ, ಈಗಾಗಲೇ ಜವಳಿ ಪಾರ್ಕ್ ಆಗುತಿತ್ತು ಎಂದರು.
ಈ ಸಂದರ್ಭದಲ್ಲಿ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹಡಿಮನೆ ಸತೀಶ್, ಸುಮಂತ್, ಸೀತಾರಾಮ್ ನಾಯಕ್, ವೆಂಕಟೇಶ್ ನಾಯಕ್, ಲೋಕೇಶ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net