ಸಂಸ್ಕಾರ ಕಲಿಕೆ ಶ್ರಾವಣ ಮಾಸದ ಮುಖ್ಯ ಉದ್ದೇಶ

ಕಡೂರಲ್ಲಿ ಕಸಾಪ ಏರ್ಪಡಿಸಿದ್ದ ಶ್ರಾವಣ ಸಂಜೆಯ ಕಾರ್ಯಕ್ರಮವನ್ನು ಕಸಾಪ ಗೌರವಾಧ್ಯಕ್ಷ ಬಿ.ಶಿವಕುಮಾರ್ ಉದ್ಘಾಟಿಸಿದರು.
ಕಡೂರಲ್ಲಿ ಕಸಾಪ ಏರ್ಪಡಿಸಿದ್ದ ಶ್ರಾವಣ ಸಂಜೆಯ ಕಾರ್ಯಕ್ರಮವನ್ನು ಕಸಾಪ ಗೌರವಾಧ್ಯಕ್ಷ ಬಿ.ಶಿವಕುಮಾರ್ ಉದ್ಘಾಟಿಸಿದರು.
Published on
ಕಡೂರು: ಸಂಸ್ಕಾರಯುತ ಬದುಕು ಕಲ್ಪಿಸಿಕೊಡುವುದೇ ಶ್ರಾವಣ ಮಾಸದ ಬಹುಮುಖ್ಯ ಸಂದೇಶ ಎಂದು ಕಸಾಪ ಮಾಜಿ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಕಸಾಪ ಏರ್ಪಡಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಹಿಂದೂಗಳಿಗೆ ಶ್ರಾವಣ ಮಾಸ ತುಂಬಾ ಪವಿತ್ರ ಮಾಸವಾಗಿದೆ. ಶ್ರಾವಣ ಮಾಸದಲ್ಲಿ ಹಿಂದೆ ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ಶನಿ ಮಹಾತ್ಮೆ, ದೇವಿ ಮಹಾತ್ಮೆ ಪಾರಾಯಣ ಮಾಡುತ್ತಿದ್ದರು. ಈಗ ಒತ್ತಡದ ಬದುಕು ಹಾಗೂ ಮೊಬೈಲ್‌ಗಳ ಹಾವಳಿಯಿಂದ ಧಾರ್ಮಿಕ ಕಾರ್ಯಗಳು ನಡೆಸುವುದೇ ದೊಡ್ಡ ಸವಾಲಾಗಿದೆ. ಭೀಮನ ಅಮಾವಾಸ್ಯೆ ಸಂದರ್ಭದಲ್ಲಿ ಚಂದ್ರನಿಗೆ ಶ್ರವಣ ನಕ್ಷತ್ರವು ತುಂಬಾ ಹತ್ತಿರವಾಗಿರುವುರಿಂದ ಈ ಮಾಸಕ್ಕೆ ಶ್ರಾವಣ ಮಾಸ ಎಂದೂ ಹೆಸರು ಬಂದಿದೆ. ಈ ಮಾಸದಲ್ಲಿ ಭೂಮಿ ತಾಯಿ ಹಸಿರಿನಿಂದ ಕಂಗೊಳಿಸುತ್ತಿರುತ್ತಾಳೆ. ಈ ನಿಟ್ಟಿನಲ್ಲಿ ನಮ್ಮಗಳ ಬದುಕು ಹಸಿರುಮಯದಿಂದ ಕೂಡಿರಲು ಶ್ರಾವಣ ಮಾಸವು ಮಹತ್ವವಾಗಿರುತ್ತದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಕಸಾಪ ಶ್ರಾವಣ ಸಂಜೆಯ ವಿಶೇಷ ಕಾರ್ಯಕ್ರಮದ ಮೂಲಕ ಪ್ರತಿನಿತ್ಯ ನಾಡುನುಡಿ ಹಾಗೂ ಜಿಲ್ಲೆಯ ಗಮನ ಸೆಳೆಯುವ ಸದ್ವಿಚಾರಗಳ ಬಗ್ಗೆ ಸ್ಮರಿಸುವ ಕಾರ್ಯವನ್ನು ಪರಿಷತ್ ಮಾಡುತ್ತಿದೆ ಎಂದರು.
ಕಸಾಪ ಗೌರವಾಧ್ಯಕ್ಷ ಬಿ.ಶಿವಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್, ಎನ್.ಎಚ್.ನಂಜುಂಡಸ್ವಾಮಿ, ಎಚ್.ಎಂ.ಲೋಕೇಶ್, ಲತಾ ರಾಜಶೇಖರ್, ಮಂಜುನಾಥ್, ಕೆ.ಜಿ.ಶ್ರೀನಿವಾಸ್ ಮೂರ್ತಿ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net