

ಪ್ರಮುಖ ಮುಖ್ಯಾಂಶಗಳು
ಬಾಳೆಹೊನ್ನೂರು: ಬಾಳೆಹೊನ್ನೂರಿನಿಂದ ಮೆಣಸುಕೊಡಿಗೆ ಮೂಲಕ ಸಾಗುವ ಮೇಲ್ಪಾಲ್-ಕೊಪ್ಪ ಮುಖ್ಯರಸ್ತೆ ಬದಿ ಧರೆ ಕುಸಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ.
ಮೆಣಸುಕೊಡಿಗೆ ಭಗತ್‌ಸಿಂಗ್ ಕ್ರೀಡಾಂಗಣ ಸಮೀಪದ ಮುಖ್ಯರಸ್ತೆಯ ತಿರುವಿನಲ್ಲಿ ಕೆಲ ತಿಂಗಳ ಹಿಂದೆ ಸುರಿದ ಮಳೆಗೆ ಧರೆ ಕುಸಿದಿದ್ದರಿಂದ ದೊಡ್ಡ ಕಂದಕ ನಿರ್ಮಾಣಗೊಂಡಿದ್ದು, ರಸ್ತೆಯ ಅಂಚಿನವರೆಗೆ ಕುಸಿದಿದೆ. ದಿನ ಕಳೆದಂತೆ ಧರೆ ಕುಸಿತ ಮುಂದುವರಿದು ರಸ್ತೆಯ ಅಂಚಿಗೆ ಬಂದಿದ್ದು, ಇದು ಹೀಗೇ ಮುಂದುವರಿದಲ್ಲಿ ಮೇಲ್ಪಾಲ್-ಕೊಪ್ಪ ಸಂಪರ್ಕವೇ ಕಡಿತಗೊಳ್ಳಲಿದೆ. ಕಂದಕ ದೊಡ್ಡದಾಗಿರುವ ಕಾರಣ ರಾತ್ರಿ ವೇಳೆ ವಾಹನ ಸವಾರರು ಇದನ್ನು ಅರಿಯದೆ ಬದಿಗೆ ತೆರಳಿದಲ್ಲಿ ಕಂದಕಕ್ಕೆ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕಾಮಗಾರಿ ನಿರ್ವಹಿಸಿ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕು.