ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಇಲ್ಲದೆ ಬಹುದೊಡ್ಡ ಗೌರವಯುತವಾದ ಓದು ಇದೆ ಎಂಬ ಅರಿವು ಪಾಲಕರಲ್ಲಿ ಮೂಡಬೇಕಿದೆ. ಆಡಳಿತ, ಶಿಕ್ಷಣ, ಆರ್ಥಿಕ ಕ್ಷೇತ್ರ, ಕೃಷಿ, ಕಾನೂನು ಮುಂತಾದ ಆಯ್ಕೆಗಳಿವೆ. ಈ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಲೇಬೇಕು. ಇದಕ್ಕೆ ಪರಿಹಾರವಾಗಿ ಫಿನ್‌ಲ್ಯಾಂಡ್ ಮಾದರಿ ಅಳವಡಿಸಿಕೊಳ್ಳಬಹುದಾಗಿದೆ. ಸಮಾನ ಹುದ್ದೆ, ಸಮಾನ ವೇತನ ಇದರ ಪ್ರಮುಖ ಲಕ್ಷಣವಾಗಿದೆ ಎಂದು ಹೇಳಿದರು.